Connect with us

LATEST NEWS

ಮುಲ್ಕಿ ಪೊಲೀಸರ ಕಾರ್ಯಾಚರಣೆ ಕುಖ್ಯಾತ ದರೋಡೆಕೋರರ ಬಂಧನ

ಮುಲ್ಕಿ ಪೊಲೀಸರ ಕಾರ್ಯಾಚರಣೆ ಕುಖ್ಯಾತ ದರೋಡೆಕೋರರ ಬಂಧನ

ಮೂಡಬಿದಿರೆ ಅಗಸ್ಟ್ 1: ಮುಲ್ಕಿ , ಹಳೆಯಂಗಡಿ, ಕಿನ್ನಿಗೋಳಿ ಪರಿಸರದಲ್ಲಿ ನಡೆದ ಕೊಲೆ , ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಬಜ್ಪೆಯ ಶೌಖತ್ ಅಲಿ ,ಅನ್ಸಾರ್ ಯಾನೆ ಅಂನ್ಚು ಕೊಲ್ನಾಡ್, ಹಳೆಯಂಗಡಿಯ ಮೇಘರಾಜ್ ಹಳೆಯಂಗಡಿ, ಬಿಸಿರೋಡಿನ ಜಾಕಿರ್ ಹುಸೇನ್ , ಅನ್ಸಾರ್ ಪಡುಬಿದ್ರಿ ಎಂದು ಗುರುತಿಸಲಾಗಿದೆ.

ಆರೋಗಳು ದರೋಡೆಯಲ್ಲಿ ಕುಖ್ಯಾತರಾಗಿದ್ದು ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ ಪರಿಸರದಲ್ಲಿ ನಡೆದ ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

2017 ರಲ್ಲಿ ಮಂಗಳೂರಿನ ಮೂಲ್ಕಿ ಠಾಣಾ ವ್ಯಾಪ್ತಿಯ ಐಕಳ ಸುಧಾಮ ಶೆಟ್ರ ಮನೆಯಲ್ಲಿ ದರೋಡೆ ಮಾಡಿ ಅವರ ಧರ್ಮಪತ್ನಿಯಾದ ವಸಂತಿ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಪ್ರಕರಣ ಸೇರಿದಂತೆ , ಪಕ್ಷಿಕೆರೆ ಕುಪ್ಪು ಸ್ವಾಮಿ ಎಂಬವರ ಪತ್ನಿಯ ಚಿನ್ನವನ್ನು ಲೂಟಿ ಹಾಗೂ ಕೊಲ್ನಾಡ್ ಪ್ರಭಾಕರ್ ಶೆಟ್ರ ಮನೆಯಲ್ಲಿ ಅವರ ಹೆಂಡತಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು.

ಪ್ರಕರಣದ ತನಿಖೆ ನಡೆಸಿದ ಮುಲ್ಕಿ ಪೊಲೀಸರು ಕುಖ್ಯಾತ ದರೋಡೆಕೋರರಾದ ಶೌಕತ್ ಆಲಿ ಮತ್ತು ಆತನ ಐದು ಮಂದಿ ಸಹಚರರನ್ನು ಮೂಲ್ಕಿಯ ಠಾಣಾಧಿಕಾರಿ ಅನಂತ ಪದ್ಮನಾಭರ ನೇತ್ರತ್ವದ ಪೊಲೀಸ್ ತಂಡ ಬಂಧಿಸಿದೆ. ಇನ್ನೂ ಕೆಲವು ಆರೋಪಿಗಳ ಬಂಧನ ಬಾಕಿ ಇದ್ದು ಶೀಘ್ರದಲ್ಲೇ ಬಂಧಿಸುವ ಬಗ್ಗೆ ಪೊಲಿಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Facebook Comments

comments