MANGALORE
ಎರಡು ದಿನದ ಮುಷ್ಕರಕ್ಕೆ ಖಾಸಗಿ ಬಸ್ ಮಾಲಕರ ಬೆಂಬಲ ಇಲ್ಲ
ಎರಡು ದಿನದ ಮುಷ್ಕರಕ್ಕೆ ಖಾಸಗಿ ಬಸ್ ಮಾಲಕರ ಬೆಂಬಲ ಇಲ್ಲ
ಮಂಗಳೂರು ಜನವರಿ 7: ಹಲವು ಬೇಡಿಕೆಗೆಳ ಈಡೇರಿಕೆಗೆ ಆಗ್ರಹಿಸಿ 10 ಕಾರ್ವಿುಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಕರೆ ಕೊಟ್ಟಿರುವ 2 ದಿನಗಳ ಮುಷ್ಕರಕ್ಕೆ ದಕ್ಷಿಣಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲಕರು ಬೆಂಬಲ ವ್ಯಕ್ತಪಡಿಸಿಲ್ಲ.
ಕಾಪೋರೇಟ್ ಬಂಡವಾಳ ಪರ ಕಾರ್ವಿುಕ ಕಾನೂನುಗಳ ತಿದ್ದುಪಡಿ, ಮೋಟಾರು ವಾಹನ(ತಿದ್ದುಪಡಿ)ಮಸೂದೆ 2017 ವಿರೋಧಿಸಿ, ಹಣದುಬ್ಬರ ತಡೆಗಟ್ಟಿ ಬೆಲೆ ಏರಿಕೆ ನಿಯಂತ್ರಣ ಹೀಗೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಎರಡು ದಿನ ರಾಷ್ಟ್ರ ವ್ಯಾಪ್ತಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.
ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಖಾಸಗಿ ಬಸ್ ಮಾಲಕರು ಈ ಮುಷ್ಕರಕ್ಕೆ ತಮ್ಮ ಬೆಂಬಲ ಘೋಷಿಸಿಲ್ಲ. ಈ ಹಿನ್ನಲೆಯಲ್ಲಿ ಈ ಎರಡು ದಿನ ಎಂದಿನಂತೆ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ನಡೆಯಲಿದೆ.
ಜಿಲ್ಲೆಯ ಜೀವನಾಡಿ ಖಾಸಗಿ ಬಸ್ ಗಳು ಈ ಹಿನ್ನಲೆಯಲ್ಲಿ ಖಾಸಗಿ ಬಸ್ ಗಳು ಮುಷ್ಕರಕ್ಕೆ ಬೆಂಬಲ ನೀಡದ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಷ್ಕರ ನಡೆಯುವುದು ಅನುಮಾನವಾಗಿದೆ.
ಕಮ್ಯುನಿಸ್ಟ್ ಬೆಂಬಲಿತ ಕಾರ್ಮಿಕ ಸಂಘಟನೆಗಳಿಂದ ಮಾತ್ರ ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಬೀದಿ ಬದಿ ವ್ಯಾಪಾರಸ್ಥರ ಸಂಘ ಬಂದ್ ಗೆ ಬೆಂಬಲ ನೀಡಿದೆ. ಕೆಲವು ಸಂಘಟನೆಗಳು ಪರಿಸ್ಥಿತಿ ಅನುಗುಣವಾಗಿ ನಿರ್ಧರಿಸಲು ಮುಂದಾಗಿವೆ.
Facebook Comments
You may like
ಚಲಿಸುತ್ತಿದ್ದ ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಆರೋಪಿಯ ಬಂಧನ
ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಬಿದ್ದ ಮಂಗಳೂರು ಸರ್ವೇಯರ್!
ಟೈಂ ಕೀಪಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕರ ಹೊಡೆದಾಟ – ಬಸ್ ವಶಕ್ಕೆ
ಮಂಗಳೂರಿಗೆ ಯೋಗಿ ಆದಿತ್ಯನಾಥ; ಪೇಜಾವರ ಶ್ರೀಗಳ ಭೇಟಿ
ಓವರ್ ಟೇಕ್ ವಿಚಾರಕ್ಕೆ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಗಲಾಟೆ..ಟ್ರಾಫಿಕ್ ಜಾಮ್ ನಿಂದ ಸಂಕಷ್ಟಕೀಡಾದ ಸಾರ್ವಜನಿಕರು
ಉತ್ತರ ಪ್ರದೇಶ – ಬಸ್ ಟ್ರಕ್ ಮುಖಾಮುಖಿ ಡಿಕ್ಕಿ -10 ಮಂದಿ ಸಾವು
You must be logged in to post a comment Login