ನಿಜಾಮುದ್ದೀನ್ ಸಮಾವೇಶದಲ್ಲಿ ಯಾರೂ ಭಾಗವಹಿಸಲಿಲ್ಲ – ಜಿಲ್ಲಾಧಿಕಾರಿ

ಉಡುಪಿ ಎಪ್ರಿಲ್ 2: ದೆಹಲಿ ನಿಜಾಮುದ್ದೀನ್ ಸಮಾವೇಶದಲ್ಲಿ ಉಡುಪಿಯಿಂದ ಯಾರೂ ಪಾಲ್ಗೊಂಡಿಲ್ಲ, ಆದರೆ ದೆಹಲಿಗೆ ಆ ಸಂದರ್ಭದಲ್ಲಿ ಓಡಾಡಿದವರು ಪತ್ತೆ ಹಚ್ಚಲಾಗಿದ್ದು ಅವರಲ್ಲಿ ಕೆಲವು ಮಂದಿಯನ್ನು ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ದೆಹಲಿ ನಿಜಾಮುದ್ದೀನ್ ಸಮಾವೇಶದಲ್ಲಿ ಉಡುಪಿಯಿಂದ ಯಾರೂ ಪಾಲ್ಗೊಂಡಿಲ್ಲ. ಆದರೆ ಆ ಸಮಾವೇಶದ ಸಂದರ್ಭ ಉಡುಪಿಯ 16 ಮಂದಿ ದೆಹಲಿಯಲ್ಲಿ ಓಡಾಟ ನಡೆಸಿದ್ದರು. 16 ಮಂದಿಯನ್ನು ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಪತ್ತೆ ಹಚ್ಚಲಾಗಿದ್ದು, ಈ ಪೈಕಿ ಒಂಬತ್ತು ಮಂದಿಯನ್ನು ಹಾಸ್ಪಿಟಲ್ ಕ್ವಾರಂಟೈನ್ ಮಾಡಿದ್ದೇವೆ ,ಉಳಿದ ಏಳು ಮಂದಿ ಬೇರೆ ಬೇರೆ ಊರುಗಳಲ್ಲಿದ್ದಾರೆ ಸರಕಾರಕ್ಕೆ ಎಲ್ಲಾ ಮಾಹಿತಿಯನ್ನು ರವಾನೆ ಮಾಡಿದ್ದೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಕೂಲಿ ಕಾರ್ಮಿಕರ ಸಮಸ್ಯೆಗೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಕೂಲಿ ಕಾರ್ಮಿಕರನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಹೊರ ಜಿಲ್ಲೆಯವರು ಆತಂಕಪಡುವ ಅಗತ್ಯವಿಲ್ಲ ಮಧ್ಯರಾತ್ರಿ ಎದ್ದು ನಮ್ಮ ಜಿಲ್ಲೆ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿದರು.
ಉಡುಪಿ ನಿರ್ಮಿತಿ ಕೇಂದ್ರದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ರೂ ದೇಣಿಗೆಯನ್ನು ಉಡುಪಿ‌ ಜಿಲ್ಲಾಧಿಕಾರಿ ಜಿ.ಜಗಧೀಶ್ ಅವರಿಂದ ಘೋಷಣೆ ಮಾಡಿದ್ದಾರೆ. ಒಂದು ಕೋಟಿ ರೂ ಡಿ.ಡಿಯನ್ನು‌ ಉಸ್ತುವಾರಿ ಸಚಿವರ ಮೂಲಕ‌ ಸಿಎಂ ಗೆ ತಲುಪಿಸಲಾಗುವುದು ಎಂದು ತಿಳಿಸಿದರು.