Connect with us

LATEST NEWS

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾವುದೇ ಕರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ – ಜಿಲ್ಲಾಧಿಕಾರಿ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾವುದೇ ಕರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ – ಜಿಲ್ಲಾಧಿಕಾರಿ

ಮಂಗಳೂರು, ಮಾ 11: ಪ್ರಪಂಚವನ್ನೇ ಅಲ್ಲೊಲ ಕಲ್ಲೊಲಗೊಳಿಸಿದ ಮಾಹಾಮಾರಿ ಕರೋನಾ ವೈರಸ್ ಪ್ರಕರಣ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.

ಮಾರ್ಚ್ 10ರ ಮಂಗಳವಾರದಂದು ವಿದೇಶದಿಂದ ಎಲ್ಲಾ 437 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಮತ್ತು ಎನ್.ಎಂ.ಪಿ.ಟಿ.ಯಲ್ಲಿ 45 ಜನರನ್ನು ತಪಾಸಣೆ ಮಾಡಲಾಗಿದೆ. ಇವರಲ್ಲಿ ಯಾರಲ್ಲೂ ಕೊರೋನಾ ಲಕ್ಷಣಗಳು ಕಂಡುಬಂದಿಲ್ಲ.
ಅಲ್ಲದೆ ಫೆಬ್ರರಿ 1ರಿಂದ ಇಲ್ಲಿಯ ತನಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 25,351 ಪ್ರಯಾಣಿಕರನ್ನು ಮತ್ತು ಜನವರಿ 23ರಿಂದ ಇಲ್ಲಿಯ ತನಕ ಎನ್ ಎಂಪಿಟಿಯಲ್ಲಿ ಒಟ್ಟು 5358 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ, ಯಾವುದೇ ಕೊರೋನಾ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಇನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ವ್ಯವಸ್ಥೆಯ ಬಗ್ಗೆ ಮೈಸೂರು ವಿಭಾಗದ ವಿಭಾಗೀಯ ಜಂಟಿ ನಿರ್ದೇಶಕರು ಪರಿಶೀಲನೆ ನಡೆಸಿದ್ದಾರೆ ಎಂಬುವುದಾಗಿಯೂ ತಿಳಿಸಿದ್ದಾರೆ.

duಇನ್ನು ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಗಂಟಲು ನೋವು ಕಂಡುಬಂದಲ್ಲಿ ಕೂಡಲೇ ಉಚಿತ ಕರೆ ಸಂಖ್ಯೆ 104/1077 ಅಥವಾ ದೂರವಾಣಿ ಸಂಖ್ಯೆ 0824-2442590 ಸಂಖ್ಯೆಗೆ ಕರೆ ಮಾಡಲು ಆರೋಗ್ಯ ಇಲಾಖೆ ತಿಳಿಸಿದ್ದಾರೆ.