Connect with us

LATEST NEWS

ಎನ್ಎಂಪಿಟಿ ಅಗ್ನಿಶಾಮಕ ಸಿಬ್ಬಂದಿಗೂ ಕೊರೊನಾ

ಮಂಗಳೂರು ಜುಲೈ 20: ನವಮಂಗಳೂರು ಆಡಳಿತ ವಿಭಾಗ ಸಿಬ್ಬಂದಿಗೆ ಕೊರೊನಾ ಸೊಂಕು ದೃಢಪಟ್ಟ ಬೆನ್ನಲ್ಲೆ ಎನ್ಎಂಪಿಟಿಯ ಕ್ರೇನ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಅಗ್ನಿಶಾಮಕದಳದ 13 ಸಿಬ್ಬಂದಿಗೆ ಕೊರೊನಾ ಸೊಂಕು ತಗುಲಿದೆ.


ಇನ್ನು ಬಂದರಿನ ಕ್ರೆನ್ ವಿಭಾಗ ಸಿಬ್ಬಂದಿಗಳಲ್ಲೂ ಸೊಂಕು ಪತ್ತೆಯಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿರುವರನ್ನು ಕ್ವಾರಂಟೈನ್ ಮಾಡಲಾಗಿದೆ. ಹೊರಗುತ್ತಿಗೆ ನೀಡಿರುವುದರಿಂದ ಇತರೆ ಕಾರ್ಮಿಕರನ್ನು ಬಳಸಿ ಕೆಲಸ ಮುಂದುವರೆಸಲಾಗಿದೆ. ಇದರಿಂದ ಕಂಟೈನರ್ ಗಳನ್ನು ಹಡಗಿನಿಂದ ಟ್ರಕ್ ಲೋಡ್ ಮಾಡಲು ಸಿಬ್ಬಂದಿ ಕೊರತೆ ಉಂಟಾಗಿದೆ, ಕೊರೊನಾದಿಂದ ಅಗಸ್ಟ್ ಕೊನೆಯ ವಾರದವರೆಗೂ ಬಂದರು ನಿರ್ವಹಣೆ ಆಡಳಿತ ಮಂಡಳಿಗೆ ಸವಾಲಾಗಿ ಪರಿಣಮಿಸಿದೆ.

Facebook Comments

comments