ಪಾಟ್ನಾ, ಮಾರ್ಚ್ 04: ಬಿಹಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳ ಸಾಧ್ಯತೆ ಕುರಿತು ಚರ್ಚೆಗಳು ಗರಿಗೆದರಿವೆ. ಮುಖ್ಯಮಂತ್ರಿ Nitish Kumar ರಾಜ್ಯಸಭೆಗೆ ತೆರಳುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಮಾತುಕತೆ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತ ಊಹಾಪೋಹಗಳು ಜೋರಾಗಿವೆ.

ಸಿಎಂ ಸ್ಥಾನಕ್ಕೆ ಬಿಜೆಪಿಯಿಂದ ಹೊಸ ಮುಖವನ್ನು ಮುಂದಿರಿಸುವ ಕುರಿತು ಅನೌಪಚಾರಿಕ ಚರ್ಚೆಗಳು ನಡೆದಿರುವುದಾಗಿ ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ, ನಿತೀಶ್ ಕುಮಾರ್ ಅವರ ಪುತ್ರ Nishant Kumar ಅವರಿಗೆ ಉಪಮುಖ್ಯಮಂತ್ರಿಯ ಜವಾಬ್ದಾರಿ ನೀಡುವ ಪ್ರಸ್ತಾವನೆ ಕೂಡ ಪರಿಶೀಲನೆಯಲ್ಲಿ ಇದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಆದರೆ, ಈ ಕುರಿತು ಅಧಿಕೃತ ಘೋಷಣೆ ಆಗಿಲ್ಲ.

75 ವರ್ಷದ ನಿತೀಶ್ ಕುಮಾರ್ 2015ರಿಂದ ಬಿಹಾರದ ಸಿಎಂ ಆಗಿದ್ದಾರೆ.  ಇತ್ತೀಚೆಗೆ ಜೆಡಿಯು ರಾಷ್ಟ್ರೀಯ ಕಾರ್ಯಾಧ್ಯಕ್ಷ Sanjay Jha ಪಾಟ್ನಾದಲ್ಲಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಕೇಂದ್ರ ಸಚಿವ ಹಾಗೂ ಲಾಲನ್ ಸಿಂಗ್ ಎಂದೇ ಪರಿಚಿತರಾದ Rajiv Ranjan Singh ಅವರ ಭೇಟಿಯೂ ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ ನೀಡಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಿಹಾರದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಅಧಿಕೃತ ಸ್ಪಷ್ಟನೆ ಸಿಗುವವರೆಗೆ ಊಹಾಪೋಹಗಳು ಮುಂದುವರಿಯುವ ಸಾಧ್ಯತೆ ಇದೆ.

Share Information