Connect with us

LATEST NEWS

ಮಂಗಳೂರು – ನಿಫಾ ಆತಂಕಿತನ ವರದಿ ನೆಗೆಟಿವ್

ಮಂಗಳೂರು ಸೆಪ್ಟೆಂಬರ್ 15: ಮಂಗಳೂರಿನಲ್ಲಿ ಆತಂಕಕ್ಕೆ ಕಾರಣವಾಗಿದ್ದ ನಿಫಾ ಆತಂಕಿತ ಯುವಕನ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ.


ಕಾರವಾರ ಮೂಲದ ಯುವಕನೊಬ್ಬ ಸ್ವ -ಇಚ್ಛೆಯಿಂದ ನಿಫಾ ವೈರಸ್ ಪರೀಕ್ಷೆ ಮಾಡುವಂತೆ ಮಂಗಳೂರಿಗೆ ಬಂದಿದ್ದ.‌ ಈತ ಗೋವಾದಲ್ಲಿ ಹಿಂದೆ ಆರ್​ಟಿಪಿಸಿಆರ್​​ ಕಿಟ್ ತಯಾರಿಸುವ ಮತ್ತು ಇದೀಗ ನಿಫಾ ಸೋಂಕಿಗೆ ಸಂಬಂಧಿಸಿದ ಕಿಟ್ ತಯಾರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಸ್ವಯಂ ರಕ್ಷಕ ಸಾಧನವನ್ನು ಧರಿಸಿ ಕೆಲಸ ಮಾಡುತ್ತಿದ್ದರೂ ಫೋಬಿಯಾದಿಂದ ಆತ ನಿಫಾ ಬಗ್ಗೆ ಆತಂಕಗೊಂಡು ಪರೀಕ್ಷೆಗೆ ಬಂದಿದ್ದ ಎಂದಿದ್ದಾರೆ.

ಆತನಿಗೆ ನಿಫಾದ ಯಾವುದೇ ಲಕ್ಷಣ ಇಲ್ಲದಿದ್ದರೂ, ದೃಢವಾಗಿ ನಿಫಾ ಇರುವ ಶಂಕೆ ವ್ಯಕ್ತಪಡಿಸಿದ ಕಾರಣ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೇ ಆತನ ಮಾದರಿಯನ್ನು ಪಡೆದು ಬೆಂಗಳೂರು ಮೂಲಕ ಪುಣೆ ಲ್ಯಾಬ್​​ಗೆ ಕಳುಹಿಸಲಾಗಿತ್ತು. ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಷನ್​​ನಲ್ಲಿ ಇರಿಸಲಾಗಿತ್ತು. ಇದರ ಪರೀಕ್ಷಾ ವರದಿ ಬಂದಿದ್ದು ರಿಪೋರ್ಟ್ ನೆಗೆಟಿವ್ ಆಗಿದೆ ಎಂದಿದ್ದಾರೆ.