Connect with us

LATEST NEWS

ರಾತ್ರಿ ಕರ್ಪ್ಯೂ ಸಂಕಷ್ಟದಲ್ಲಿ ಆರ್ಕೆಸ್ಟ್ರಾ ಕಲಾವಿದರು…ಜಿಲ್ಲಾಧಿಕಾರಿಗೆ ಮನವಿ ನೀಡಿ ತಮ್ಮ ಸಮಸ್ಯೆ ಹೇಳಿಕೊಂಡ ಕಲಾವಿದರು

ಉಡುಪಿ ಎಪ್ರಿಲ್ 20: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹಿನ್ನಲೆ ರಾಜ್ಯ ಸರಕಾರ ಉಡುಪಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಪ್ಯೂ ಜಾರಿಗೊಳಿಸಿದೆ. ಈ ಹಿನ್ನಲೆ ರಾತ್ರಿ ಸಂದರ್ಭ ಕಾರ್ಯಕ್ರಮಗಳನ್ನು ಮುಗಿಸಿ ಬರುವ ಕಲಾವಿದರಿಗೆ ತೊಂದರೆ ಉಂಟಾಗುತ್ತಿರುವ ಕುರಿತಂತೆ ಕರಾವಳಿ  ಸಂಗೀತ ಕಲಾವಿದರ ಒಕ್ಕೂಟ ಉಡುಪಿ ಜಿಲ್ಲೆ ಇದರ ವತಿಯಿಂದ ಸಮಸ್ಯೆಗಳ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.


ಆರ್ಕೆಸ್ಟ್ರಾ ಕಲಾವಿದರಿಗೆ  ರಾತ್ರಿ ಕಾರ್ಯಕ್ರಮ ಮುಗಿಸಿ ಬರುವಾಗ ನೈಟ್ ಕರ್ಪ್ಯೂ ಹಿನ್ನಲೆ ಪೊಲೀಸ್ ಬಂದೋಬಸ್ತ್ ಸಂದರ್ಭ ಸಮಸ್ಯೆಗಳು ಉಂಟಾಗುತ್ತಿದ್ದು, ಅಲ್ಲದೆ ರಾತ್ರಿ ಕರ್ಫ್ಯೂನಿಂದಾಗಿ ವಹಿಸಿಕೊಂಡ ಸಂಗೀತ ಕಾರ್ಯಕ್ರಮಗಳು ರದ್ದಾಗಿ  ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಕರೋನಾದಿಂದಾಗಿ  ಅದೆಷ್ಟೋ ಪೂರ್ವ ನಿಗದಿತ ಆರ್ಡರ್ ಗಳು ಕ್ಯಾನ್ಸಲ್ ಆಗಿದ್ದು ನಾವೆಲ್ಲ ತುಂಬ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಕಳೆದ ವರುಷದ ಸೀಸನ್ ಸಮಯದಲ್ಲಿ ಮತ್ತು ಈ ವರುಷದಲ್ಲೂ ಇದೇ ಪರಿಸ್ಥಿತಿ ಮುಂದು ವರೆದಿದ್ದು ನಮಗೆಲ್ಲ ತುಂಬ ಆತಂಕ ಉಂಟಾಗಿದೆ. ಈ ಕುರಿತಂತೆ ಸೂಕ್ತ ಕ್ರಮಕೈಗೊಂಡು ಕಲಾವಿದರನ್ನು ಈ ಸಂಕಷ್ಟದಿಂದ ಪಾರು ಮಾಡಬೇಕೆಂದು ಈ ಬಗ್ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಇವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಸಂಗೀತ ಕಲಾವಿದರ ಉಡುಪಿ ವಲಯಾಧ್ಯಕ್ಷೆ ಮುಕ್ತಾ  ಶ್ರೀನಿವಾಸ್ ಭಟ್,   ಸಂತೋಷ್ ಪಾನಾ, ಪ್ರಜ್ವಲ್ ಆಚಾರ್ಯ,ಶರತ್ ಉಚ್ಚಿಲ, ವಾಮನ   ಕುಮಾರ್ ಅರುಣ್ , ರೋಹಿತ್  ಮಲ್ಪೆ ಹಾಗೂ ಅನೇಕ ಕಲಾವಿದರು ಭಾಗವಹಿಸಿದ್ದರು.