LATEST NEWS
ಸ್ಯಾಟಲೈಟ್ ವಿದೇಶಿ ಕರೆ ಹಿಂದೆ ಬಿದ್ದ ರಾಷ್ಟ್ರೀಯ ತನಿಖಾ ದಳ
ಸ್ಯಾಟಲೈಟ್ ವಿದೇಶಿ ಕರೆ ಹಿಂದೆ ಬಿದ್ದ ರಾಷ್ಟ್ರೀಯ ತನಿಖಾ ದಳ
ಮಂಗಳೂರು ಅಗಸ್ಟ್ 16: ಕರ್ನಾಟಕ ಕರಾವಳಿ ಮೂಲಕ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿತ್ತು. ಅಲ್ಲದೆ ಭಯೋತ್ಪಾದಕರ ದಾಳಿ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆಯ ಸಂದೇಶ ನೀಡಿದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾದಳ ದಕ್ಷಿಣಕನ್ನಡ ಜಿಲ್ಲೆಯಲ್ಲಿ ತೀವ್ರ ತನಿಖೆ ನಡೆಸುತ್ತಿದೆ.
ಮೂವರು ಎನ್ ಐಎ ಅಧಿಕಾರಿಗಳ ನೇತೃತ್ವದ ತಂಡವೊಂದು ಸ್ಥಳೀಯ ಪೊಲೀಸರ ನೆರವಿನೊಂದಿಗೆ ತನಿಖೆ ಮುಂದುವರೆದಿದೆ. ಸ್ಯಾಟಲೈಟ್ ಕರೆಯ ದಕ್ಷಿಣಕನ್ನಡ ಜಿಲ್ಲೆಯಿಂದ ಕರೆ ವಿನಿಮಯದ ಬಗ್ಗೆ “ರಾ” ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಿತ್ತು. ಈ ನಡುವೆ ತುರಾಯ ಎನ್ನುವ ಸಾಟ್ಲಲೈಟ್ ಪೋನ್ ನಿಂದ ಬಂದ ಕರೆಯೊಂದು ಟ್ರೇಸ್ ಆದ ಕಾರಣ ರಾಷ್ಟ್ರೀಯ ತನಿಖಾ ದಳ ಬೆಳ್ತಂಗಡಿಯ ನಿಡ್ಲೆ ಹಾಗೂ ಚಿಕ್ಕಮಗಳೂರಿನ ಕಳಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ ಎಂದು ಹೇಳಲಾಗಿದೆ. ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಎನ್ ಐಎ ಸಂಪರ್ಕದಲ್ಲಿದ್ದು ತನಿಖೆಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳು ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
ತುರಾಯ ಎನ್ನುವುದು ಒಂದು ಸ್ಯಾಟಲೈಟ್ ಮೊಬೈಲ್ ಪೊನ್ ಸರ್ವಿಸ್ ಕೊಡುವ ಕಂಪೆನಿ. ಇದರ ಮೂಲಕ ದುಬೈಯಾಗಿದ್ದು ಕೊಲ್ಲಿ ರಾಷ್ಟ್ರಗಳಲ್ಲಿರುವರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಮುಂಬೈ ದಾಳಿ ನಂತರ ಭಾರತದಲ್ಲಿ ತುರಾಯ ಉಪಗ್ರಹ ಆದಾರಿತ ಫೋನ್ ಸರ್ವಿಸ್ ನ್ನು ಬ್ಯಾನ್ ಮಾಡಲಾಗಿತ್ತು. ಹೆಚ್ಚಾಗಿ ಅಂತರಾಷ್ಟ್ರೀಯ ಸರಕು ಹಡಗುಗಳಲ್ಲಿ ಈ ಸ್ಯಾಟಲೈಟ್ ಪೋನ್ ಸರ್ವಿಸನ್ನು ಬಳಸುತ್ತಾರೆ ಎಂದು ಹೇಳಲಾಗಿದೆ.
ಬೆಳ್ತಂಗಡಿಯ ಗೇರುಕಟ್ಟೆಯ ಸಮೀಪದ ಗೊವಿಂದೂರಿಗೆ ಇದೇ ತುರಾಯ ಎಂಬ ಸ್ಯಾಟಲೈಟ್ ಫೋನ್ ಮೂಲಕ ಕರೆ ಬಂದಿದೆ ಎಂದು ಹೇಳಲಾಗಿದೆ. ಆದರೆ ಎಲ್ಲಿಂದ ಈ ಕರೆ ಮಾಡಲಾಗಿದೆ ಎಂದು ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ಸಮುದ್ರ ಮಾರ್ಗದಿಂದ ಈ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಹಡಗಿನಲ್ಲಿ ಪ್ರಯಾಣಿಸುವ ಮಂದಿ ಹೆಚ್ಚಾಗಿ ಈ ತುರಾಯ ಸ್ಯಾಟಲೈಟ್ ಫೋನ್ ಬಳಸುತ್ತಾರೆ ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವವರು ಹೆಚ್ಚಾಗಿರುವ ಕಾರಣ ಯಾರಾದರೂ ಬಳಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ತನಿಖಾ ದಳ ಈ ಕರೆಯ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಕರೆಯ ಮೊಬೈಲ್ ನಂಬರ್ ಹಾಗೂ ಮೊಬೈಲ್ ನ IMEI ಎಲ್ಲದರ ಮಾಹಿತಿ ಇದೆ ಎಂದು ಹೇಳಲಾಗಿದೆ. ಕರಾವಳಿ ಮೂಲಕ ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನುವ ಕೇಂದ್ರ ಗುಪ್ತಚರ ಇಲಾಖೆಯ ಸೂಚನೆಯನ್ವಯ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.