Connect with us

LATEST NEWS

ಪೂಕಳಂ ನಂತರ ಎಚ್ಚೆತ್ತ ಅಧಿಕಾರಿಗಳು ,ಪಂಪ್ ವೆಲ್ ಪ್ಲೈಓವರ್ ಸರ್ವಿಸ್ ರಸ್ತೆ ಹೊಂಡಕ್ಕೆ ತೆಪೆ

ಮಂಗಳೂರು ಸೆಪ್ಟೆಂಬರ್ 3: ಪಂಪ್ ವೆಲ್ ಪ್ಲೈಓವರ್ ಸರ್ವಿಸ್ ರಸ್ತೆಯಲ್ಲಿರುವ ಹೊಂಡಗಳಲ್ಲಿ ಓಣಂ ನ ಪೂಕಳಂ ರಚಿಸಿದ ನಂತರ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗ ಸರ್ವಿಸ್ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಿದೆ.


ಪಂಪ್ ವೆಲ್ ಪ್ಲೈಓವರ್ ಕಾಮಗಾರಿ ಮುಗಿದ ನಂತರ ತರಾತುರಿಯಲ್ಲಿ ನಿರ್ಮಿಸಿದ್ದ ಸರ್ವಿಸ್ ರಸ್ತೆ ಈ ಬಾರಿಯ ಮಳೆಗೆ ಸಂಪೂರ್ಣ ಹಾಳಾಗಿದ್ದು, ರಸ್ತೆಯ ತುಂಬೆಲ್ಲಾ ಹೊಂಡಗಳೆ ಕಾಣುತ್ತಿತ್ತು. ಪಂಪ್ ವೆಲ್ ಕಾಮಗಾರಿ ಸಂದರ್ಭ 10 ವರ್ಷಗಳವರೆಗೆ ವಾಹನ ಸಂಚಾರಕ್ಕೆ ಕಷ್ಟವಾಗಿದ್ದ ಇದೇ ರಸ್ತೆಯಲ್ಲಿ ಪ್ಲೈಓವರ್ ಆದ ನಂತರವೂ ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನಲೆ ಮಂಗಳೂರಿನ ಶೈಕ್ಷಣಿಕ ಸಲಹೆಗಾರರಾದ ರಾಧಿಕ ಧೀಮಂತ್‌ ಅವರು ಸೆಪ್ಟೆಂಬರ್ 1ರಂದು ಪಂಪ್ ವೆಲ್ ಪ್ಲೈಓವರ್ ನ ಸರ್ವಿಸ್ ರಸ್ತೆಯಲ್ಲಿರುವ ಗುಂಡಿಗಳ ಸುತ್ತಲೂ ಪೂಕಳಂ ಮಾಡಿ ಜಿಲ್ಲಾಡಳಿತದ ಗಮನ ಸೆಳೆದಿದ್ದರು. ಇವರು ಸರ್ವಿಸ್ ರಸ್ತೆಯಲ್ಲಿ ಮಾಡಿರುವ ಪೂಕಳಂ ನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಇದರಿಂದ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಪಂಪ್ ವೆಲ್ ಸರ್ವಿಸ್ ರಸ್ತೆಯ ಹೊಂಡಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Facebook Comments

comments