ಕೇರಳ ಡಿಸೆಂಬರ್ 06: ಕೇರಳದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಇದೀಗ ಸಂಶಯ ಮೂಡಲಾರಂಭಿಸಿದ್ದು, ಮಲಪ್ಪುರಂನ ರಾಮನಟ್ಟುಕರ-ವಲಂಚೇರಿ ವಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದ ಪ್ರಕರಣದ ಬೆನ್ನಲೇ ಇದೀಗ ಕೊಲ್ಲಂ-ಕೊಟ್ಟಿಯಂ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ಮೈಲಕ್ಕಾಡ್‌ನ ಕೊಟ್ಟಿಯಂ ಬಳಿ ಈ ಘಟನೆ ನಡೆದಿದೆ.


ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಗೋಡೆ ಕುಸಿದಿದೆ. ಇದರೊಂದಿಗೆ ಸರ್ವೀಸ್ ರಸ್ತೆ ಕುಸಿದಿದೆ. ಮೈಲಕ್ಕಾಡ್ ಸೇತುವೆಯ ಬಳಿಯ ಅಪ್ರೋಚ್ ರಸ್ತೆಯಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಕುಸಿದ ಸಮಯದಲ್ಲಿ, ಸರ್ವೀಸ್ ರಸ್ತೆಯಲ್ಲಿ ಶಾಲಾ ಬಸ್ ನಿಂತಿತ್ತು. ವಾಹನದಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.


ನೀರು ನಿಲ್ಲುವ ಸಾಧ್ಯತೆ ಇರುವ ಪ್ರದೇಶದಲ್ಲಿ ಅವೈಜ್ಞಾನಿಕ ನಿರ್ಮಾಣದ ಬಗ್ಗೆ ದೂರುಗಳು ಬಂದಿದ್ದವು, ಆದರೆ ಕಾಮಗಾರಿ ನಡೆಸುವ ಕಂಪೆನಿ ಅದನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಸ್ಥಳೀಯ ಆರೋಪಿಸಿದ್ದಾರೆ.
ಕೊಲ್ಲಂ ಸಂಸದ ಎನ್.ಕೆ. ಪ್ರೇಮಚಂದ್ರನ್ ಮಾತನಾಡಿದ ಈ ಘಟನೆಯು ಎತ್ತರದ ಹೆದ್ದಾರಿಗಳ ಅವೈಜ್ಞಾನಿಕ ನಿರ್ಮಾಣದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ ಎಂದರು.

Share Information