ಬೆಳಗಾವಿ, ಡಿಸೆಂಬರ್​ 21: ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಕುರಿತಂತೆ ಇದ್ದ ಗೊಂದಲಗಳಿಗೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫುಲ್ ಸ್ಟಾಪ್ ಇಟ್ಟಿದ್ದು, ಸೋಮವಾರದಿಂದ ಶನಿವಾರದ ಒಳಗಡೆ 24ನೇ ಕಂತು ಬಿಡುಗಡೆ ಆಗುತ್ತೆ ಎಂದು ಹೇಳಿದ್ದಾರೆ.


ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವೇಳೆ ಮಾಹಿತಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​, ಈಗಾಗಲೇ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿದೆ. ಮುಂದಿನ ವಾರ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಸತ್ತವರ ಖಾತೆ​​ಗೂ ಗೃಹಲಕ್ಷ್ಮೀ ಯೋಜನೆ ಹಣ ಸಂದಾಯ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಸಿಎಸ್​ ನೇತೃತ್ವದಲ್ಲಿ ಎರಡು ಬಾರಿ ಸಭೆ ಮಾಡಲಾಗಿದೆ. ಸತ್ತವರ ಅಕೌಂಟ್​​ಗೆ ಹಣ ಸಂದಾಯವಾದರೆ ತಕ್ಷಣ ಗೊತ್ತಾಗಲ್ಲ. ಈಗ ಸಾಫ್ಟ್​ವೇರ್​​​ ಅಭಿವೃದ್ಧಿ ಅಳವಡಿಕೆ ಮಾಡಿದ್ದೇವೆ. ಮರಣ ಪ್ರಮಾಣ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತರು ಪರಿಶೀಲನೆ ಮಾಡುತ್ತಾರೆ. ಹೀಗಾಗಿ ಅದನ್ನ ಸದ್ಯಕ್ಕೆ ತಡೆಹಿಡಿದಿದ್ದೇವೆ. ತಪ್ಪಾಗಿ ಸಂದಾಯವಾಗಿರುವ ಹಣವನ್ನು ವಾಪಸ್ ಪಡೆಯುವ ಹೊಣೆಗಾರಿಕೆಯನ್ನು ಕೆಲ ಬ್ಯಾಂಕ್​​ಗೆ ಸೂಚನೆ ಕೊಟ್ಟಿದ್ದೇವೆ. ಸಿಎಸ್ ಬ್ಯಾಂಕ್​​ಗೆ ನೋಟಿಸ್ ಕೊಟ್ಟಿದ್ದಾರೆ, ಲೇಟರ್ ಬರೆದಿದ್ದಾರೆ ಎಂದರು.

Share Information