ಬೆಂಗಳೂರು, ಡಿಸೆಂಬರ್ 27: ನವವಿವಾಹಿತರಿಬ್ಬರು ಸಂಸಾರದಲ್ಲಿ ಸಮಸ್ಯೆಗೆ ಜೀವವನ್ನೆ ಕಳೆದುಕೊಂಡಿದ್ದಾರೆ. ಬೆಂಗಳೂರು ನವವಿವಾಹಿತೆ ಗಾನವಿ (26) ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಇದೀಗ ಆಕೆಯ ಪತಿ ಸೂರಜ್ ಕೂಡ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮದುವೆಯಾಗಿ ಹನಿಮೂನ್ ಹೋಗಿದ್ದ ಗಾನವಿ ಮತ್ತು ಸೂರಜ್ ದಂಪತಿಗಳ ನಡುವೆ ಗಲಾಟೆ ನಡೆದಿತ್ತು,ಇದರಿಂದಾಗಿ ಹನಿಮೂನ್ ನನ್ನು ಅರ್ಧಕ್ಕೆ ಮುಗಿಸಿ ಮನೆಗೆ ವಾಪಾಸ್ ಆಗಿದ್ದರು, ಆದರೆ ಬಳಿಕವೂ ಗಲಾಟೆ ಮುಂದುವರೆದಿತ್ತು. ಈ ನಡುವೆ ಗಾನವಿ, ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಬ್ರೈನ್ ಡೆಡ್ ಆಗಿದ್ದ ಕಾರಣ ಕೊನೆಯುಸಿರೆಳೆದಿದ್ದರು.


ಗಾನವಿಯ ಸಾವಿನ ಬಳಿಕ ಸೂರಜ್ ತಾಯಿ ಜಯಂತಿ ಹಾಗೂ ಸಹೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದರು. ಪತ್ನಿಯ ಆತ್ಮಹತ್ಯೆಯ ವಿಚಾರದಲ್ಲಿ ಆಕೆಯ ಪೋಷಕರು ಹಾಗೂ ಸಂಬಂಧಿಕರ ಆಕ್ರೋಶ ಮತ್ತು ಅವರಿಂದಾದ ಅವಮಾನ ತಡೆಯಲಾಗದೆ ತಾಯಿ- ಮಗ ಇಬ್ಬರೂ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share Information