Connect with us

    LATEST NEWS

    ಹೊಸ ವರ್ಷಾಚರಣೆಗೆ ವಿಎಚ್ ಪಿ‌ ಬಜರಂಗದಳ ವಿರೋಧ : ಬಿಗಿ ಪೋಲಿಸ್ ಸರ್ಪಗಾವಲು

    ಹೊಸ ವರ್ಷಾಚರಣೆಗೆ ವಿಎಚ್ ಪಿ‌ ಬಜರಂಗದಳ ವಿರೋಧ : ಬಿಗಿ ಪೋಲಿಸ್ ಸರ್ಪಗಾವಲು

    ಮಂಗಳೂರು,ಡಿಸೆಂಬರ್ 30. ಡಿಸೆಂಬರ್ 31 ರ ರಾತ್ರಿ ಹೊಸ ವರ್ಷಾಚರಣೆಗೆ ವಿಎಚ್ ಪಿ‌ ಬಜರಂಗದಳ  ತೀವೃ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಪ್ರಮುಖ ಸ್ಥಳಗಳಲ್ಲಿ ಕಟ್ಟೆಚರ ವಹಿಸಲಾಗುತ್ತಿದೆ. 5 ಕೆ ಎಸ್ ಆರ್ ಪಿ ಪ್ಲಟೂನ್, 15 ನಗರ ಶಶಸ್ತ್ರ ಮೀಸಲು ಪೋಲಿಸ್ ತುಕಡಿಗಳು, 120 ಗೃಹ ರಕ್ಷಕ ದಳದ ಸಿಬಂದಿಗಳನ್ನು ನೇಮಕ ಮಾಡಲಾಗಿದೆ.

    ಹೊಸ ವರ್ಷದ ಪಾರ್ಟಿ ಆಯೋಜಕರಿಗೆ ಸಭ್ಯ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ.

    ಹೊಸ ವರ್ಷದ ಕಾರ್ಯಕ್ರಮಗಳನ್ನು ನಿಗದಿತ ಸಮಯದೊಳಗೆ ಮುಗಿಸಲು ಪೋಲಿಸ್ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

    ಯಾರೇ ಆದರೂ ಕಾನೂನು ಸುವ್ಯವಸ್ಥೆ ಗೆ ಭಂಗ ಉಂಟು ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಪೋಲಿಸ್ ಇಲಾಖೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply