DAKSHINA KANNADA
ಕಟೀಲು ಮೇಳಕ್ಕೆ ಸಡ್ಡು, ಸತೀಶ್ ಪಟ್ಲರಿಂದ ಹೊಸ ಮೇಳ..
ಕಟೀಲು ಮೇಳಕ್ಕೆ ಸಡ್ಡು, ಸತೀಶ್ ಪಟ್ಲರಿಂದ ಹೊಸ ಮೇಳ..
ಮಂಗಳೂರು, ಅಕ್ಟೋಬರ್ 12: ಮೂಲ್ಕಿ ಸಮೀಪದ ಜ್ಜಾನ ಶಕ್ತಿ ಸುಬ್ರಮಣ್ಯಸ್ವಾಮಿ ದೇವಳದ ವತಿಯಿಂದ ಈ ಬಾರಿ ನೂತನ ಯಕ್ಷಗಾನ ಮೇಳ ಹೊರಡಲಿದೆ, ಪಟ್ಲ ಸತೀಶ್ ಶೆಟ್ಟಿ ಮೇಳದ ಸಾರಥ್ಯ ವಹಿಸಲಿದ್ದು ಕಲಾವಿದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಒಂದು ಮೂಲದ ಪ್ರಕಾರ ಕಟೀಲು ಮೇಳದಿಂದ ಹಿಮ್ಮೇಳ ಮುಮ್ಮೇಳ, ಸಹಾಯಕರು ಸೇರಿ ಒಟ್ಟು 20 ಕ್ಕೂ ಹೆಚ್ಚು ಕಲಾವಿದರು ಸೇರ್ಪಡೆಗೊಳ್ಳಲ್ಲದ್ದಾರೆ.
ಇದರಲ್ಲಿ ಪ್ರಮುಖವಾಗಿ ಅಕ್ಷಯ್ ಮಾರ್ನಾಡ್, ರಾಜೇಶ್ ನಿಟ್ಟೆ, ಸತೀಶ್ ನೈನಾಡು, ಸಂದೇಶ್ ಮಂದಾರ, ಉಜಿರೆ ನಾರಾಯಣ, ಬೆಳ್ಳಿಪ್ಪಾಡಿ ಮೋಹನ್, ಲೋಕೇಶ್ ಮುಚ್ಚೂರು ಸೇರ್ಪಡೆಗೊಳ್ಳಲಿದ್ದಾರೆ.
ಕಾಲಮಿತಿ ಯಕ್ಷಗಾನವಾದರಿಂದ ಬಪ್ಪನಾಡು ಮೇಳದ ಕಲಾವಿದರೂ ಬಾಗವಹಿಸುವ ಸಾದ್ಯತೆ ಇದ್ದು ಖ್ಯಾತ ಅರ್ಧದಾರಿ ರಾದಾಕೃಷ್ಣ ನಾವಡ ಬಾಗವಹಿಸುವುದು ಖಚಿತವಾಗಿದೆ.
ಉಳಿದಂತೆ ಹಿಮ್ಮೇಳದಲ್ಲಿ ಪಟ್ಲ ಸತೀಶ್, ಪ್ರಪುಲ್ಲಚಂದ್ರ ನೆಲ್ಯಾಡಿ, ಪೂರ್ಣೇಶ, ಪ್ರಶಾಂತ್ ವಗೆನಾಡು, ಗುರುಪ್ರಸಾದ್ ಬೊಳಿಜಡ್ಕ ಇದ್ದಾರೆ.
ಕಟೀಲು ಮೇಳದಲ್ಲಿ ಪಟ್ಲರಿಗೆ ದೇವಿ ಮಹಾತ್ಮೆ ಪ್ರಸಂಗ ಸಾಕಷ್ಟು ಪ್ರಖ್ಯಾತಿ ತಂದು ಕೊಟ್ಟಿದ್ದು ಇಲ್ಲಿಯೂ ಕೂಡ ದೇವಿ ಮಹಾತ್ಮೆ ಪ್ರಸಂಗಕ್ಕೆ ಕಲಾವಿದರು ಸೆಟ್ ಆದಂತೆ ಇದ್ದಾರೆ.
ಅಕ್ಪಯ್ ಕುಮಾರ್ ದೇವಿ, ರಾಜೇಶ್ ನಿಟ್ಟೆ ಮಾಲಿನಿ, ಸತೀಶ್ ನೈನಾಡು ಮಹಿಷ, ರಾಧಾಕೃಷ್ಣ ನಾವಡ ರಕ್ತಬೀಜ, ಲೋಕೇಶ್ ಮುಚ್ಚೂರು ಮತ್ತು ಬೆಳ್ಳಿಪಾಡಿ ಮೋಹನ ಚಂಡ ಮುಂಡರು ಹೀಗೆ ದೇವಿ ಮಹಾತ್ಮೆ ಪ್ರಸಂಗಕ್ಕೆ ಸೆಟ್ಟ್ ಆಗುವಂತೆ ಕಲಾವಿದರ ಆಯ್ಕೆ ಆದಂತೆ ಇದೆ.
ಉಳಿದಂತೆ ನವಂಬರ್ ಅಂತ್ಯದಲ್ಲಿ ಮೇಳ ಹೊರಡುವ ಸಾದ್ಯತೆ ಇದ್ದು, ಕಾಲಮಿತಿ ಯಕ್ಷಗಾನವಾಗಿದೆ, ಬುಕಿಂಗ್ ಪ್ರಕ್ರಿಯೆ ಇನ್ನಷ್ಟೆ ನಡೆಯಬೇಕಿದೆ.
ಹಿಂದಿನಿಂದಲೂ ಪಾವಂಜೆ ಕ್ಷೇತ್ರ ಯಕ್ಷಗಾನಕ್ಕೆ ಗರಿಷ್ಠ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಇಲ್ಲಿಂದ ಹೊರಡುವ ನೂತನ ಮೇಳ ಯಶಸ್ಸಾಗುದರಲ್ಲಿ ಸಂಶಯವಿಲ್ಲ.
ಕಟೀಲು ಕ್ಷೇತ್ರದ ಬಹುಪಾಲು ಕಲಾವಿದರು ಈ ಮೇಳದಲ್ಲಿ ಇರಲಿದ್ದು, ಇದು ಕಟೀಲು ಮೇಳದಲ್ಲಿ ಕಲಾವಿದರ ಕೊರತೆ ಎದುರಾಗುವ ಸಾಧ್ಯತೆಯೂ ಇದೆ.
ಕಟೀಲು ಮೇಳದ ಯಜಮಾನರ ಜೊತೆ ವೈಮನಸ್ಸು ಹೊಂದಿರುವ ಸತೀಶ್ ಪಟ್ಲ ಈ ಮೂಲಕ ಹೊಡೆತ ನೀಡಲು ಮುಂದಾಗಿದ್ದಾರೆ.