Connect with us

LATEST NEWS

ಖಾಲಿ ಇರುವ  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿವೆ ಹೊಸ ಅತಿಥಿಗಳು

ಖಾಲಿ ಇರುವ  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿವೆ ಹೊಸ ಅತಿಥಿಗಳು

ಮಂಗಳೂರು ಮಾರ್ಚ್ 26: ಕರೋನಾ ಹಿನ್ನಲೆ ಇಡೀ ದಕ್ಷಿಣಕನ್ನಡ ಜಿಲ್ಲೆಯ ಲಾಕ್ ಡೌನ್ ಆಗಿದೆ. ಬಂದ್ ನಿಂದಾಗಿ ಜನ ಮನೆಯಲ್ಲೇ ಸೇರಿಕೊಂಡಿದ್ದಾರೆ.ಈ ನಡುವೆ ವಿಮಾನ ಹಾರಾಟ ಇಲ್ಲದೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಖಾಲಿಯಾಗಿದೆ.

ಇದೇ ಪ್ರಕಾರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಬೀಕೋ ಎನ್ನುತ್ತಿದ್ದು, ಈ ನಿಲ್ದಾಣದ ಬಳಿಕ ಹೊಸ ಅತಿಥಿಗಳು ಇಂದು ಬಂದಿದ್ದಾರೆ. ಹೌದು ಐದು ನರಿ ಮರಿಗಳು ವಿಮಾನ ನಿಲ್ದಾಣದ ಬಳಿ ಬಂದಿದ್ದು, ಈ ನರಿಗಳ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಎಲ್ಲಾ ಐದು ನರಿ ಮರಿಗಳನ್ನೂ ಹಿಡಿದು, ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

 

Facebook Comments

comments