DAKSHINA KANNADA
ಮಂಗಳೂರು ಜೈಲಿನಿಂದಾಗಿ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ!

ಮಂಗಳೂರು, ಮಾರ್ಚ್ 26: ಮಂಗಳೂರು ಜೈಲು ಕೈದಿಗಳ ಕಳ್ಳಾಟಗಳಿಂದಲೇ ಕುಖ್ಯಾತಿ ಪಡೆದಿದೆ. ಇತ್ತೀಚೆಗಷ್ಟೇ ಜೈಲಿನ ಆವರಣದಲ್ಲಿ ಗಾಂಜಾ ಪೊಟ್ಟಣ ಎಸೆದಿದ್ದರು. ಇದಕ್ಕೂ ಮುನ್ನ ಮೊಬೈಲ್ ಸೇರಿ ಮಾದಕ ವಸ್ತುಗಳೂ ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ, ಜೈಲಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಇದರ ಪರಿಣಾಮ, ಜೈಲಿನ ಸುಮಾರು ಒಂದು ಕಿ.ಮೀ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಜೈಲಿನ ಕೂಗಳತೆ ದೂರದಲ್ಲಿ ನೂರಾರು ಮನೆ, ಫ್ಲ್ಯಾಟ್, ಅಂಗಡಿ, ಹೋಟೆಲ್‌ಗಳಿದ್ದು, ಬಹುತೇಕರಿಗೆ ಮೊಬೈಲ್ ಜಾಮರ್ ಅಳವಡಿಕೆಯಿಂದ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ.
ರೋಗಿಯೊಬ್ಬರು ಹೃದ್ರೋಗ ತಜ್ಞರನ್ನು ಸಂಪರ್ಕಿಸಲು ಸಾಧ್ಯವಾಗದೇ, ಸಾವು ಬದುಕಿನ ನಡುವೆ ಹೋರಾಡಿದ್ದಾರೆ ಎಂಬುದಾಗಿ ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ್ ಕಾಮತ್ ತಿಳಿಸಿದ್ದು, ಸಮಸ್ಯೆಯ ಪರಿಹಾರಕ್ಕೆ ಆಗ್ರಹಿಸಿದ್ದಾರೆ.ಬೊಗಳುವ ಪ್ರತಿ ನಾಯಿಗೂ ಕಲ್ಲು ಎಸಿತಾ ಕೂತ್ರೆ ನಾವು ಮುಂದೆ ಹೋಗ್ಲಿಕ್ಕೆ ಆಗತ್ತಾ ?: ಚೈತ್ರ ಕುಂದಾಪುರ

ನಗರ ಭಾಗದಲ್ಲೇ ಜಿಲ್ಲಾ ಕಾರಾಗೃಹ: ಮಂಗಳೂರು ನಗರ ಭಾಗದಲ್ಲೇ ಜಿಲ್ಲಾ ಕಾರಾಗೃಹ ಇರುವುದರಿಂದಾಗಿ ಸಾವಿರಾರು ಮಂದಿಗೆ ಈ ಸಮಸ್ಯೆಯಾಗುತ್ತಿದೆ. ಅದರಲ್ಲೂ, ಈಗ 5ಜಿ ಜಾಮರ್ ಅಳವಡಿಸಿದ್ದು, ಸಾರ್ವಜನಿಕರಿಗೂ ಕಂಟಕ ತಂದೊಡ್ಡಿದೆ. ಇನ್ನು ಈ ಜೈಲಿನಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಇರುವುದರಿಂದ, ನಗರದಿಂದ ಗ್ರಾಮಾಂತರ ಭಾಗಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಒಟ್ಟಿನಲ್ಲಿ ಜೈಲಲ್ಲಿರುವ ಕೈದಿಗಳ ಕಳ್ಳಾಟಗಳಿಗೆ ಬ್ರೇಕ್ ಹಾಕಲು ಅಳವಡಿಸಿದ ಮೊಬೈಲ್ ಜಾಮರ್, ಸಾರ್ವಜನಿಕರಿಗೂ ಕಂಟಕವಾಗಿದೆ. ಇನ್ನಾದರೂ, ಸಂಬಂಧ ಪಟ್ಟವರು ನೆಟ್ವರ್ಕ್ ಸಮಸ್ಯೆಗೆ ಅಂತ್ಯ ಹಾಡಬೇಕಿದೆ.