Connect with us

LATEST NEWS

ನೇತ್ರಾವತಿ ನದಿಗೆ ಹಾರಿದ ವ್ಯಕ್ತಿಯ ಶವಪತ್ತೆ….!!

ಮಂಗಳೂರು : ನಿನ್ನೆ ಉಳ್ಳಾಲ ಸೇತುವೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಇಂದು ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ತಲಪಾಡಿ ದೇವಿನಗರ ನಿವಾಸಿ ಸುರೇಂದ್ರ ರೈ(45) ಎಂದು ಗುರುತಿಸಲಾಗಿದೆ. ನದಿಯಲ್ಲಿ ತೇಲುತಿದ್ದ ಶವವನ್ನು ಕಿಂಗ್ಸ್ ಸ್ಟಾರ್ ಉಳಿಯ ಸದಸ್ಯರು ಮೇಲಕೆತ್ತಿದ್ದಾರೆ.


ಸುರೇಂದ್ರ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು, ಅವರಿಗೆ ವಿಪರೀತ ಕುಡಿತದ ಚಟವಿತ್ತು ಎನ್ನಲಾಗಿದೆ ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ.

ಶುಕ್ರವಾರ ಅಪರಾಹ್ನ ಸುರೇಂದ್ರ ಅವರ ಫೋನ್ ಸೇತುವೆಯ ಮೇಲೆ ಪತ್ತೆಯಾಗಿತ್ತು ಇದರ ಹಿನ್ನೆಲೆಯಲ್ಲಿ ವ್ಯಕ್ತಿ ನದಿಗೆ ಹಾರಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದ ಸ್ಥಳೀಯರು. ಇಂದು ಬೆಳಿಗ್ಗೆ ಉಳಿಯದ ಕಿಂಗ್ಸ್ ಸ್ಟಾರ್ ಸದಸ್ಯರು ನದಿಯಲ್ಲಿ ತೇಲುತಿದ್ದ ಶವವನ್ನು ಮೇಲಕೆತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Facebook Comments

comments