ನೇಪಾಳ ಸೆಪ್ಟೆಂಬರ್ 08: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, (Facebook) ಯೂಟ್ಯೂಬ್ (Youtube) ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಸೇರಿದಂತೆ 26 ಸೋಶಿಯಲ್ ಮಿಡಿಯಾಗಳನ್ನು ಬ್ಯಾನ್ ಮಾಡಿರುವ ನೇಪಾಳ ಸರಕಾರದ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಯುವ ಜನತೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ನೇಪಾಳದ ಕೆಪಿ ಓಲಿ ಸರ್ಕಾರವು ಫೇಸ್‌ಬುಕ್, ಯೂಟ್ಯೂಬ್ ಇನ್‌ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿದೆ. ಈ ಹಿನ್ನಲೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಸರ್ಕಾರವು ಯುವಕರು ರೀಲ್‌ಗಳನ್ನು ಮಾಡುವುದನ್ನು ನಿಲ್ಲಿಸಿದ ತಕ್ಷಣ ಯುವಕರು ಬೀದಿಗಿಳಿದು ನಿಜವಾದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು ಉದ್ಯೋಗಗಳು ಎಲ್ಲಿವೆ ಎಂದು ಕೇಳಲು ಪ್ರಾರಂಭಿಸಿದ್ದಾರೆ. ಸರ್ಕಾರವು ಸೈನ್ಯವನ್ನು ನಿಯೋಜಿದ್ದು ಕರ್ಫ್ಯೂ ವಿಧಿಸಿದೆ. ನೇಪಾಳದ Gen-Z ಸೆಪ್ಟೆಂಬರ್ 8ರಂದು ನೇಪಾಳದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಮೈತಿಘರ್, ಕಠ್ಮಂಡು ಮತ್ತು ದೇಶಾದ್ಯಂತ ಇತರ ಪ್ರಮುಖ ನಗರಗಳಲ್ಲಿ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮದ ಮೇಲಿನ ಸರ್ಕಾರದ ನಿಯಂತ್ರಣದ ವಿರುದ್ಧ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.

ಸದ್ಯ ಮಾಹಿತಿ ಪ್ರಕಾರ ಕನಿಷ್ಟ 10 ಮಂದಿ ಪ್ರತಿಭಟನಾಕಾರರು ಸಾವನಪ್ಪಿದ್ದು, 87ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.



