ಬಸ್ ಗೆ ಬಿದ್ದ ಬೆಂಕಿ ಆರಿಸಲು ನಿದ್ರೆಯಲ್ಲಿದ್ದ ಅಗ್ನಿಶಾಮಕದಳವನ್ನು ಎಬ್ಬಿಸಿ ಕರೆ ತಂದ ಪೊಲೀಸರು

ಮಂಗಳೂರು ಎಪ್ರಿಲ್ 14: ಬಸ್ ಗೆ ಬಿದ್ದ ಬೆಂಕಿ ಆರಿಸಲು ಕರೆ ಸ್ವೀಕರಿಸದ ಅಗ್ನಿಶಾಮಕದಳವರನ್ನು ಕೊನೆಗೆ ಪೊಲೀಸ್ ಮೂಲಕ ಕರೆ ತಂದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಹೊರವಲಯ ಜಪ್ಪಿನಮೂಗ್ರು ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿ ಗುಜರಿಗೆ ನಿಲ್ಲಿಸದ್ದ ಬಸ್ಸ್ ವೊಂದಕ್ಕೆ ಯಾರು ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಬೆಂಕಿ ತಗುಲಿದ ಸಂದರ್ಭ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸದೆ ಅಗ್ನಿ ಶಾಮಕದಳದವರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 5 ಗಂಟೆ ಬಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬಸ್ ಬೆಂಕಿ ತಾಗಿದ ಹಿನ್ನಲೆಯಲ್ಲಿ ಅಲ್ಲೆ ಹತ್ತಿರವಿದ್ದು ಒಂದು ಗುಜಿರಿ ಜೀಪಿಗೆ ಕೂಡಾ ಬೆಂಕಿ ತಗುಲಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಂಕನಾಡಿ ನಗರ ಪೋಲಿಸರು ಸ್ಥಳಕ್ಕೆ ಆಗಮಿಸಿ ಪಾಂಡೇಶ್ವರ ಅಗ್ನಿಶಾಮಕ ದಳಕ್ಕೆ ಸುಮಾರು 45 ನಿಮಿಷಗಳ ಕಾಲ ದೂರವಾಣಿ ಕರೆ ಮಾಡಿದರು.

ಆದರೆ ತುರ್ತು ಪರಿಸ್ಥಿತಿ ಸಂದರ್ಭ 24 ಗಂಟೆ ಸೇವೆ ನೀಡುವ ಅಗ್ನಿಶಾಮಕ ದಳ ಮಾತ್ರ ಕರೆಯನ್ನು ಸ್ವೀಕರಿಸಲೇ ಇಲ್ಲ. ಕೊನೆಗೆ ಕಂಕನಾಡಿ ಪೊಲೀಸರು ಪಾಂಡೇಶ್ವರ ಪೋಲಿಸ ಠಾಣೆಗೆ ಕರೆ ಮಾಹಿತಿಯನ್ನ ನೀಡಿ ಅವರ ಮುಖಾಂತರ ಅಗ್ನಿಶಾಮಕ ದಳದವರನ್ನು ಕರೆಸಿ ಬೆಂಕಿ ಆರಿಸಬೇಕಾಗಿ ಬಂದಿತ್ತು.

13 Shares

Facebook Comments

comments