ಬೆಂಗಳೂರು ಸೆಪ್ಟೆಂಬರ್ 24: ಕಾಂತಾರ ಚಾಪ್ಟರ್ 1ರ ಹವಾ ಇದೀಗ ಇಡೀ ದೇಶದಲ್ಲಿ ಹಬ್ಬಿದೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೆಂಡಿಂಗ್ ನಲ್ಲಿದೆ. ಇದೀಗ ಕಾಂತಾರ ಅಧ್ಯಾಯ1‘ ಟ್ರೇಲರ್ ಬಿಡುಗಡೆ ಬಳಿಕ ಅಂಚೆ ಇಲಾಖೆಯು ವಿಶೇಷ ಕಾರ್ಡ್‌ ಹಾಗೂ ಲಕೋಟೆಗಳನ್ನು ಅನಾವರಣಗೊಳಿಸಿದೆ.


ಈ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಭಾರತೀಯ ಅಂಚೆ ಕಚೇರಿ ವಿಭಾಗವು ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ‘ಭಕ್ತಿ ಜಾನಪದ ಮತ್ತು  ಸಂಪ್ರದಾಯವನ್ನು ಒಂದುಗೂಡಿಸುವ ಒಂದು ರೋಮಾಂಚಕ ಆಚರಣೆಯಾದ ಭೂತ ಕೋಲ, ಸಾಂಸ್ಕೃತಿಕ ಪರಂಪರೆಗೆ ಅಂಚೆ ಇಲಾಖೆಯು ಮೆಚ್ಚುಗೆ ಸೂಚಿಸಿದೆ.

ಹೊಂಬಾಳೆ ಫಿಲ್ಮ್ಸ್ ಸಹಯೋಗದೊಂದಿಗೆ ಕರ್ನಾಟಕ ಅಂಚೆ ವಿಭಾಗವು ಬಿಡುಗಡೆ ಮಾಡಿದ ವಿಶೇಷ ಲಕೋಟೆ ಮೂಲಕ ‘ಕಾಂತಾರ ಅಧ್ಯಾಯ1‘ ಸಿನಿಮಾಕ್ಕೆ ಜಾಗತಿಕ ಮಟ್ಟದಲ್ಲಿ ಗೆಲುವು ಸಿಗಲಿ’ ಎಂದು ಬರೆದುಕೊಂಡಿದೆ.

Share Information