Connect with us

LATEST NEWS

ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವ ನವಯುಗ

ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವ ನವಯುಗ

ಉಡುಪಿ ಅಗಸ್ಟ್ 16 :ಸಾಸ್ತಾನ ಗುಂಡ್ಮಿ ರಾಷ್ಟ್ರೀಯ ಹೆದ್ದಾರಿ 66 ರ ಟೋಲ್ ಗೇಟ್ ನಲ್ಲಿ ಮತ್ತೆ ಗೊಂದಲ ವಾತಾವರಣ ನಿರ್ಮಾಣವಾಗಿದ್ದು, ಟೋಲ್ ಗೇಟ್ ಸಿಬ್ಬಂದಿಗಳು ನಿನ್ನೆ ರಾತ್ರಿಯಿಂದ ಎಲ್ಲಾ ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿದ್ದು, ಯಾವುದೇ ಸ್ಥಳೀಯ ವಾಹನಗಳಿಗೂ ಕೂಡ ವಿನಾಯಿತಿ ನೀಡದೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಅಲ್ಲದೆ ಹೆಜಮಾಡಿಯಲ್ಲಿ ಎಲ್ಲಾ ವಾಹನಗಳಿಂದಲೂ ಟೋಲ್ ನ್ನು ನವಯುಗ ಸಂಸ್ಥೆ ವಸೂಲಿ ಮಾಡುತ್ತಿದ್ದು, ಜಿಲ್ಲಾಧಿಕಾರಿ ಆದೇಶದನ್ವಯ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.

ಎರಡೂ ಟೋಲ್ ಗಳಲ್ಲಿ ಸಂಪೂರ್ಣ ಪೊಲೀಸರ ಸರ್ಪಗಾವಲು ಕಲ್ಪಿಸಿರುವ ಸಂಸ್ಥೆ ಪೊಲೀಸ್ ಹಾಗೂ ತಹಶಿಲ್ದಾರ ರಕ್ಷಣೆಯಲ್ಲಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ಆರೋಪಿಸಿಲಾಗಿದೆ.

ಈ ನಡುವೆ ಟೋಲ್ ಸಂಗ್ರಹಣೆ ವಿರುದ್ದ ಹೋರಾಟಕ್ಕೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಭೆ ಕರೆದಿದ್ದು ಸಭೆಯ ಬಳಿಕ ಹೋರಾಟದ ರೂಪುರೇಷೆ ಸಿದ್ದಗೊಳ್ಳಲಿದೆ.

ಟೋಲ್ ಗೇಟ್ ಬಳಿ ಗಲಾಟೆ ನಡೆಯುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಟೋಲ್ ಗೇಟ್ ಸುತ್ತಮುತ್ತ ಪೊಲೀಸ್ ಪಡೆ ಸರ್ಪಗಾವಲು ಕಲ್ಪಿಸಲಾಗಿದೆ.

ಹೆಜಮಾಡಿಯಲ್ಲೂ ಕೂಡ ಟೋಲ್ ಸಂಗ್ರಹ ವಿರುದ್ದ ಸಾರ್ವಜನಿಕರು ಪ್ರತಿಭಟನೆಗೆ ಸಿದ್ದತೆ ನಡೆಸಿದ್ದಾರೆ.