Connect with us

    LATEST NEWS

    ಮತ್ತೆ ನಮೋ ಬ್ರಿಗೇಡ್ ಗೆ ಚಾಲನೆ?

    ಮತ್ತೆ ನಮೋ ಬ್ರಿಗೇಡ್ ಗೆ ಚಾಲನೆ?

    ಮಂಗಳೂರು ಸಪ್ಟೆಂಬರ್ 06: ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಮಾಡಲು ಕಳೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ನಮೋ ಬ್ರಿಗೆಡ್ ಗೆ ಈಗ ಮತ್ತೆ ಚಾಲನೆ ದೊರೆಯಲಿದೆ.

    ಕಳೆದ ಲೋಕಸಭಾ  ಚುನಾವಣೆ ಸಮಯದಲ್ಲಿ ಮೋದಿ ಅಭಿಮಾನಿಗಳನ್ನೆಲ್ಲ ಅದರಲ್ಲೂ ಯುವ ಸಮೂಹ ಒಟ್ಟಿಗೆ ಸೇರಿಸಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ನಮೋಬ್ರಿಗೇಡ್ ಸಂಘಟನೆ ಮತ್ತೊಮ್ಮೆ ಪ್ರಾರಂಭವಾಗುವ ಸಾಧ್ಯತೆ ಇದೆ.

    ಕಳೆದ ಬಾರಿ ಮಂಗಳೂರಿನಿಂದ ಪ್ರಾರಂಭವಾದ  ಈ ಸಂಘಟನೆ ರಾಜ್ಯಾದ್ಯಂತ ದೊಡ್ಡ ಮಟ್ಟಿನಲ್ಲಿ ಹೆಸರು ಮಾಡಲು ಚಕ್ರವರ್ತಿ ಸೂಲಿಬೆಲೆ ಪ್ರಮುಖ ಪಾತ್ರವಹಿಸಿದ್ದರು. ಅದಾಗಲೇ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕರ್ನಾಟಕ ಬಿಜೆಪಿಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮೋ ಬ್ರಿಗೇಡ್ ನೀಡಿದ ಸಹಕಾರದಿಂದ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲವು ಸಾಧ್ಯವಾಗಿತ್ತು.

    ರಾಜ್ಯ ಬಿಜೆಪಿ ನಾಯಕರ ನಡವಳಿಕೆಯಿಂದ ಬೇಸತ್ತ ಹಲವಾರು ಯುವಕರು ಮೋದಿ ಹೆಸರಿನಲ್ಲಿ ಒಟ್ಟು ಸೇರಿ ಮೋದಿಯವರನ್ನು ಪ್ರಧಾನಿಯಾಗಿಸುವ ಏಕೈಕ ಗುರಿಯೊಂದಿಗೆ ಸಂಘಟಿತರಾಗಿದ್ದರು. ರಾಜ್ಯದಲ್ಲಿ ಲೋಕಸಭೆಯ 19 ಸೀಟುಗಳು ಪಡೆದಿರುವುದರ ಹಿಂದೆ ನಮೋ ಬ್ರಿಗೇಡ್ ಪಾತ್ರ ಪ್ರಮುಖವಾಗಿತ್ತು ಅಂತ ಬಿಜೆಪಿ ನಾಯಕರೇ ಅಂದು ಹೇಳಿಕೊಂಡಿದ್ದರು.

    ಈಗ ‘ಮತ್ತೊಮ್ಮೆ ಮೋದಿ ‘ ಎಂಬ ಘೋಷವಾಕ್ಯದೊಂದಿಗೆ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಮೋ ಬ್ರಿಗೇಡ್ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಯುವ ಪೀಳಿಗೆಯಲ್ಲಿ ಹೆಚ್ಚಿದ ನಮೋ ಅಭಿಮಾನ ಪರಿಗಣಿಸಿ ಮತ್ತು ಯುವಶಕ್ತಿಯಲ್ಲಿ ಅಡಕವಾಗಿರುವ ಅಭಿಮಾನ ವ್ಯರ್ಥವಾಗದ ರೀತಿಯಲ್ಲಿ ಸೂಕ್ತವಾಗಿ ಬಳಿಸಿ ಒಂದೇ ಸೂರಿನಡಿಯಲ್ಲಿ ಸೇರಿಸುವುದು ಆ ಮೂಲಕ ಕರ್ನಾಟಕದಲ್ಲಿ ಮತ್ತೊಮ್ಮೆ ಮೋದಿಯವರ ಪರ ಅತ್ಯಧಿಕ ಸೀಟು ಗೆಲ್ಲಿಸುವುದು ಇದರ ಮುಖ್ಯ ಉದ್ದೇಶ ಅಂತ ಹೇಳಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply