Connect with us

  LATEST NEWS

  ಕಾಂಗ್ರೇಸ್ ಪಕ್ಷದ ಕಪಟ ನಾಟಕ ಜನರಿಗೆ ಗೊತ್ತಾಗಿದೆ – ನಳಿನ್ ಕುಮಾರ್ ಕಟೀಲ್

  ಮಂಗಳೂರು ನವೆಂಬರ್ 11: ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು, ದೇಶದಲ್ಲಿ ಬಿಜೆಪಿ ಪರವಾದ ಆಲೆಯಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಸಾಧನೆಗಳು ಜನರನ್ನು ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.


  ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಪರಿಷತ್ ಚುನಾವಣೆಯಲ್ಲೂ ಮೂರು ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಉಳಿಗ ಇನ್ನೊಂದು ಸ್ಥಾನವನ್ನು ಗೆಲ್ಲುವ ವಿಶ್ವಾಸ ಇದೆ ಎಂದರು. ಬಿಎಸ್ ಯಡಿಯೂರಪ್ಪ ಅವರು ಸಿಎಂ ಆದ ನಂತರ ಸವಾಲು ಗಳು ಎದುರಾದವು, ಎಲ್ಲವನ್ನೂ ಯಶಸ್ವಿಯಾಗಿ ಯಡಿಯೂರಪ್ಪ ಅವರು ನಿರ್ವಹಿಸಿದ್ದಾರೆ. ಕೋವಿಡ್ ನಿಯಂತ್ರಣ ದಲ್ಲೂ ಯಡಿಯೂರಪ್ಪ ಯಶಸ್ವಿಯಾಗಿದ್ದು, ರಾಜ್ಯದ ರಕ್ಷಣೆ ಯಡಿಯೂರಪ್ಪ ರಿಂದ ಮಾತ್ರ ಸಾಧ್ಯ ಅಂತ ಜ‌ನ ಮನಗಂಡಿದ್ದಾರೆ ಎಂದರು. ಇನ್ನು ಉಪಚುನಾವಣೆಯಲ್ಲಿ ಶಿರಾ ಇತಿಹಾಸದಲ್ಲಿ ಮೊದಲಬಾರಿಗೆ ಬಿಜೆಪಿ ಗೆದ್ದಿದ್ದು, ಕಾಂಗ್ರೆಸ್ ನ ಭಧ್ರಕೋಟೆಯನ್ನು ಯಡಿಯೂರಪ್ಪ ಒಡೆದಿದ್ದಾರೆ, ವಿಪಕ್ಷಗಳ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಭಿತಾಗಿದ್ದು, ಕಾಂಗ್ರೆಸ್ ಪಕ್ಷದ ಕಪಟ ನಾಟಕ ಅಂತಾ ಜನರಿಗೆ ಗೊತ್ತಾಗಿದೆ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply