ವಿವಾದಾತ್ಮಕ ಟ್ವೀಟ್ ಗೆ ಕ್ಷಮಾಪಣೆ ಕೇಳಿ ಟ್ವೀಟ್ ಮಾಡಿದ ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು ಮೇ 17: ಸಂಸದ ನಳಿನ್ ಕುಮಾರ್ ಅವರ ನಾಥುರಾಂ ಗೋಡ್ಸ್ ಜೊತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೋಲಿಕೆ ಟ್ವಿಟ್ ಕುರಿತಂತೆ ಕ್ಷಮೆಯಾಚಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಅವರ ಟ್ವೀಟ್ ಗೆ ದೇಶದಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದಂತೆ ರಾಜೀವ್ ಗಾಂಧಿ ಅವರ ಕುರಿತಂತೆ ಇರುವ ಟ್ವೀಟ್ ನ್ನು ಅಳಿಸಿ ಹಾಕಿದ್ದು, ಕ್ಷಮಾಪಣೆ ಕೇಳಿ ಟ್ವೀಟ್ ಮಾಡಿದ್ದಾರೆ.

’ಗೋಡ್ಸೆ ಒಬ್ಬರನ್ನು ಕೊಂದರು, ಕಸಬ್‌ ಕೊಂದಿದ್ದು 72 ಜನರನ್ನು, ರಾಜೀವ್‌ ಗಾಂಧಿ 17,000 ಜನರ ಸಾವಿಗೆ ಕಾರಣರಾದರು. ಇವರಲ್ಲಿ ಯಾರು ಹೆಚ್ಚು ಕ್ರೂರರೆಂದು ನೀವೇ ನಿರ್ಣಯಿಸಿ’ ಎಂದು ನಳಿನ್‌ ಕುಮಾರ್ ಕಟೀಲ್‌ ಗುರುವಾರ ಟ್ವೀಟ್‌ ಮಾಡಿದ್ದರು.
ಟ್ವೀಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಕಟೀಲ್‌ ತಾವು ಮಾಡಿದ್ದ ಟ್ವೀಟ್‌ ತೆಗೆದು ಹಾಕಿದ್ದಾರೆ.
ನಂತರ ಟೀಕೆ ವ್ಯಕ್ತವಾಗುತ್ತಿದ್ದಂತೆ ಇಂದು ಟ್ವೀಟ್ ಮಾಡಿದ ಸಂಸದ ನಳಿನ್ ಕುಮಾರ್

ಟ್ವೀಟ್ ಮೂಲಕ ಕ್ಷಮಾಪಣೆ ಕೇಳಿದ್ದಾರೆ.

Facebook Comments

comments