Connect with us

    LATEST NEWS

    ನಾಗಪುರದ ಮಾತು ಕೇಳಿ ಬ್ಯಾಂಕ್ ವಿಲೀನದ ಕ್ರಮ – ಐವನ್ ಡಿಸೋಜಾ

    ನಾಗಪುರದ ಮಾತು ಕೇಳಿ ಬ್ಯಾಂಕ್ ವಿಲೀನದ ಕ್ರಮ – ಐವನ್ ಡಿಸೋಜಾ

    ಮಂಗಳೂರು ಸೆಪ್ಟೆಂಬರ್ 3:ಕೇಂದ್ರ ಸರಕಾರ ನಾಗಪುರದ ಆರ್ ಎಸ್ಎಸ್ ಮಾತು ಕೇಳಿ ಬ್ಯಾಂಕ್ ವಿಲೀನದಂತಹ ಆತುರದಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಅರ್ಥಶಾಸ್ತ್ರಜ್ಞರ ಬದಲಿಗೆ ಪ್ರಚಾರಕರ ಮಾತು ಕೇಳಿ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದ್ದು, ನಮ್ಮ ದೇಶದ ಪ್ರಧಾನಿಗೆ ಟೈಮ್‌ ಇಲ್ಲಂತೆ. ಸದ್ಯ ಕೇಂದ್ರದ ಆಡಳಿತ ಮಲಗಿದೆ ಎಂದು ಕಿಡಿಕಾರಿದರು.

    ದೇಶದ ಆರ್ಥಿಕ ಸ್ಥಿತಿ ಐಸಿಯುನಲ್ಲಿದೆ. ಭಾರತದ ಜಿಡಿಪಿ ಬಾಂಗ್ಲಾ, ಪಾಕ್ ಗಿಂತಲೂ ಕೆಳಮಟ್ಟದಲ್ಲಿ ಬಂದಿದೆ. ಸ್ವಿಸ್ ಬ್ಯಾಂಕ್ ನ ಹಣ ತರಬೇಕಾದವರು ಆರ್ ಬಿ ಐ ನ ಹಣ ತೆಗೆದಿದ್ದಾರೆ. ಬ್ಯಾಂಕ್ ಗಳ ವಿಲೀನ ಮೂಲಕ ಬಡವರ ದಾರಿ ಬಂದ್ ಮಾಡುವುದಾಗಿದೆ. ಈ ಮೂಲಕ ಕಾರ್ಪೋರೆಟ್ ಕುಳಗಳಿಗೆ ಮಣೆ ಹಾಕಲು ಮಾಡಲಾಗಿದೆ ಎಂದು ಆರೋಪಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply