ಮಂಗಳೂರು ನವೆಂಬರ್ 22: ಚಿಕ್ಕ ಪ್ರಾಯದ ಮೂರುವರೆ ವರ್ಷದ ಕೋಣಗಳನ್ನು ಕಂಬಳದಲ್ಲಿ ಓಡಿಸಬಾರದೆನ್ನುವ ಕಾನೂನು ಪಾಲಿಸುವುದು, 24 ಗಂಟೆಯೊಳಗೆ ಕಂಬಳ ಮುಗಿಸಬೇಕೆಂಬ ಷರತ್ತಿನ ಕಾರಣಕ್ಕೆ ಈ ಬಾರಿಯಿಂದ ಸಬ್ ಜೂನಿಯರ್ ವಿಭಾಗವನ್ನು ಸ್ಪರ್ಧೆಯಿಂದ ಕೈಬಿಡಲಾಗಿದೆ. ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಈ ಮಾಹಿತಿ ನೀಡಿದ ಅವರು, ಮೈಸೂರಿನಲ್ಲಿ ಕಂಬಳ ಆಯೋಜಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬಳ ಅಸೋಸಿಯೇಶನ್‌ಗೆ ಮನವಿ ಮಾಡಿದ್ದಾರೆ. ಇಲ್ಲಿಯ ಕಂಬಳಗಳು ಮುಗಿದ ನಂತರ, ಮುಂದಿನ ಏಪ್ರಿಲ್ ವೇಳೆಗೆ ಅಲ್ಲಿ ಕಂಬಳ ಆಯೋಜನೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ReadThis –ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಧರ್ಮಸ್ಥಳ ಪ್ರಕರಣದ ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯ
‘ಕಂಬಳ ಸಮಿತಿಯ ತಜ್ಞರು ಈಗಾಗಲೇ ಮೈಸೂರಿಗೆ ಭೇಟಿನೀಡಿ, 10 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ, ಅಲ್ಲಿ ಕರೆ ನಿರ್ಮಾಣ ಸೇರಿದಂತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಬಂದಿದ್ದಾರೆ. ‘ರಾಜ್ಯದ ಯಾವ ಭಾಗದಲ್ಲಾದರೂ ಕಂಬಳ ಆಯೋಜಿಸಲು ಅಡ್ಡಿ ಇಲ್ಲ’ ಎಂದು ಹೈಕೋರ್ಟ್ ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕಂಬಳ ಆಯೋಜನೆಗೆ ತೊಂದರೆಯಾಗದು’ ಎಂದರು.



