ಸುಳ್ಯ ಜೂನ್ 20: ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ಮನೆಯ ಸಮೀಪದ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತಪಟ್ಟ ದಾರುಣ ಘಟನೆ ಇಂದು ಸಂಜೆ ನಡೆದಿದೆ.

ಕಡೀರ ನಿವಾಸಿ ವಸಂತ ಎಂಬವರ ಮಕ್ಕಳಾದ ಐದು ವರ್ಷ ಪ್ರಾಯದ ಜಶ್ವಿನ್ ಹಾಗೂ ಜಶ್ವಿನ್ ಮೃತರು. ಸಂಜೆ ಆಟವಾಡುತ್ತಿದ್ದಾಗ ಮನೆಯ ಸಮೀಪವೇ ಇದ್ದ ಕೆರೆಗೆ ಆಕಸ್ಮಿಕವಾಗಿ ಬಿದ್ದರೆಂದು ತಿಳಿದು ಬಂದಿದೆ. ಸುಳ್ಯದಿಂದ ಅಗ್ನಿ ಶಾಮಕದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂದ ಬಳಿಕ ಮೃತದೇಹ ಮೇಲೆತ್ತಲಾಯಿತು. ಜಶ್ವಿನ್ ಮತ್ತು ಜಸ್ವಿತ್ ಮುರುಳ್ಯ ಶಾಂತಿನಗರ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿಗಳು.