ಹೆಜಮಾಡಿ ಟೋಲ್ ಸಿಬಂದಿಗಳಿಂದ ಸ್ಥಳೀಯರಿಗೆ ಕಿರುಕುಳ : ಇಂದು ಮುಲ್ಕಿ ಬಂದ್

ಮಂಗಳೂರು, ಫೆಬ್ರವರಿ 05 ; ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲೆ ಗಡಿಭಾಗವಾದ ಹೆಜಮಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವಯುಗ ಕಂಪೆನಿಯ ಟೋಲ್ ಸಿಬಂದಿಗಳು ವಿನ: ಕಾರಣ ಮುಲ್ಕಿಯ ನಾಗರಿಕರಿಗೆ

ಕಿರುಕುಳ ನೀಡುತ್ತಿದ್ದು, ಟೋಲ್‌ನಲ್ಲಿ ರೌಡಿಸಂ ಮಾಡಿ ಬಲವಂತದಿಂದ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನವಯಗ ಕಂಪೆನಿಯ ಈ ಗೂಂಡಾಗಿರಿಯನ್ನು ಖಂಡಿಸಿ ಇಂದು ಮುಲ್ಕಿ ಬಂದ್‌ ಗೆ ಕರೆ ನೀಡಿದ್ದು, ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಮುಲ್ಕಿ ಅಭಿವೃದ್ದಿ ನಾಗರಿಕಾ ವೇದಿಕೆ ಈ ಬಂದ್ ಗೆ ಕರೆ ನೀಡಿದೆ. ಇದೇ ಸಂದರ್ಭದಲ್ಲಿ ಮುಲ್ಕಿ ಬಸ್ ನಿಲ್ದಾಣದಿಂದ ಹೆಜಮಾಡಿ ಟೋಲ್ ಕೇಂದ್ರದ ವರೆಗೆ ಪಾದಯಾತ್ರೆ ನಡೆಸಿ ಅಲ್ಲಿ ಧರಣಿ ಕೂರಲು ಸಮಿತಿ ನಿರ್ಧರಿಸಿದೆ.

ಪ್ರತಿಭಟನೆಗೆ ಸ್ಥಳೀಯ ಆಟೋ ಚಾಲಕರು, ನಾಗರಿಕರು, ವರ್ತಕರು ಬೆಂಬಲ ಘೋಷಿಸಿದ್ದಾರೆ.

Facebook Comments

comments