LATEST NEWS
ಮುಲ್ಕಿ – ಓಮ್ನಿ ಖಾಸಗಿ ಬಸ್ ಡಿಕ್ಕಿ – ಇಬ್ಬರು ಸಾವು ಓರ್ವ ಗಂಭೀರ
ಮಂಗಳೂರು ಎಪ್ರಿಲ್ 22: ಖಾಸಗಿ ಎಕ್ಸ್ ಪ್ರೆಸ್ ಬಸ್ ಹಾಗೂ ಓಮಿನಿ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಮುಲ್ಕಿ ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.,
ಮೃತಪಟ್ಟವರನ್ನು ವಸಂತ (64), ಬುಜಂಗ (62) ಎಂದು ಗುರುತಿಸಲಾಗಿದೆ. ಓಮ್ನಿಯಲ್ಲಿದ್ದವರು ಹಳೆಯಂಗಡಿ ಪೇಟೆ ಒಳರಸ್ತೆಯಾಗಿ ಪಾವಂಜೆ ಜಂಕ್ಷನ್ ಗೆ ಬರುತಿದ್ದು ಬಸ್ ಉಡುಪಿ ಕಡೆಗೆ ಹೋಗುತಿತ್ತು ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದ ವಸಂತ ಮತ್ತು ಬುಜಂಗ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
You must be logged in to post a comment Login