Connect with us

LATEST NEWS

ಮೂಡಾ ಅಧ್ಯಕ್ಷರಾಗಿ ರವಿಶಂಕರ್ ಮಿಜಾರ್ ನೇಮಕ

ಮೂಡಾ ಅಧ್ಯಕ್ಷರಾಗಿ ರವಿಶಂಕರ್ ಮಿಜಾರ್ ನೇಮಕ

ಮಂಗಳೂರು, ಜೂನ್ 3: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರವಿಶಂಕರ್ ಮಿಜಾರ್ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಅಧ್ಯಕ್ಷರ ಹುದ್ದೆಗೇರಲು ಹಲವು ಸಮಯಗಳಿಂದ ಲಾಬಿ ನಡೆದಿತ್ತು. ಸಂಸದ ನಳಿನ್ ಕುಮಾರ್ ಆಪ್ತರ ನಡುವಲ್ಲೇ ಲಾಬಿ ನಡೆದ ಕಾರಣ ಆಯ್ಕೆ ಮುಂದೂಡಿಕೆಯಾಗಿತ್ತು.

ವಿಶ್ವ ಹಿಂದು ಪರಿಷತ್ತಿನಲ್ಲಿ ಗುರುತಿಸಿದ್ದ ಜಗದೀಶ ಶೇಣವ, ದ.ಕ. ಜಿಲ್ಲಾ ಬಿಜೆಪಿ ವಕ್ತಾರನಾಗಿದ್ದ ಜಿತೇಂದ್ರ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ್ ಮಿಜಾರ್ ನಡುವೆ ಪೈಪೋಟಿ ನಡೆದಿತ್ತು. ಆಬಳಿಕ ಜಗದೀಶ ಶೇಣವ ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆಗೆ ಕಣ್ಣಿಟ್ಟಿದ್ದರು. ಆದರೆ, ಶೇಣವರನ್ನು ಇತ್ತೀಚೆಗೆ ಜಿಲ್ಲಾ ವಕ್ತಾರನಾಗಿ ಮಾಡುವ ಮೂಲಕ ಸಂತೈಸುವ ಕೆಲಸ ನಡೆದಿತ್ತು. ಈಗ ಬಿಲ್ಲವ ಸಮುದಾಯದ ಹಿರಿಯ ಮುಖಂಡ, ರವಿಶಂಕರ್ ಮಿಜಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೂಡಾ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.