LATEST NEWS
ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳ ರಾಜಕೀಯ ಆಯಾಮ ಅರ್ಥಮಾಡಿಕೊಳ್ಳದಿದ್ದರೆ ಹಿಂದುತ್ವಕ್ಕೆ ಭಾರಿ ಪೆಟ್ಟು – ತೇಜಸ್ವಿ ಸೂರ್ಯ

ಉಡುಪಿ ಡಿಸೆಂಬರ್ 26: ಹಿಂದೂ ಧರ್ಮ ಉಳಿಯಬೇಕಾದರೆ ಧರ್ಮವನ್ನು ನಾಶಮಾಡುವ ಶಕ್ತಿಗಳ ಬಗ್ಗೆ ಅರಿವು ಇರಬೇಕಾಗಿದ್ದು, ವೈರಿಗಳ ಅರಿವಿಲ್ಲದಿದ್ದರೆ ಸ್ವರಕ್ಷಣೆ ಸಾಧ್ಯವಿಲ್ಲ, ಹಿಂದೂ ಧರ್ಮದ ಪುನರುತ್ಥಾನವೂ ಸಾಧ್ಯವಿಲ್ಲ ಎಂದು ಸಂಸದ ತೇಜಶ್ವಿ ಸೂರ್ಯ ಹೇಳಿದ್ದಾರೆ.
ಉಡುಪಿಯಲ್ಲಿ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಂ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಪಂಚದಲ್ಲಿ ಅನ್ಯಮತಗಳ ದಾಳಿಯ ಹೊರತಾಗಿಯೂ ಉಳಿದುಕೊಂಡಿರುವ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವುದು ಹಾಗೂ ಪುನರುತ್ಥಾನಗೊಳಿಸುವುದು ಇಂದಿನ ಅಗತ್ಯ ಎಂದರು.
ಎಲ್ಲ ದೇವರು, ಮತ, ಧರ್ಮಗಳು ಒಂದೇ ಎಂಬ ಕಲ್ಪನೆ ಬಲವಾಗಿ ಬೇರೂರಿದ್ದು, ನಮ್ಮನ್ನಾಳುವ ನಾಯಕರು ಕೂಡ ‘ಸರ್ವಧರ್ಮ ಸಮಭಾವ’ ಎಂದು ಹೇಳುತ್ತಲೇ ಹಿಂದೂ ಧರ್ಮದ ವೈರಿಗಳು ಯಾರು ಎಂಬುದನ್ನು ತಿಳಿಯದಂತಹ ಪರಿಸ್ಥಿತಿಗೆ ಬಂದಿದ್ದೇವೆ.
ಹಿಂದೂ ಸಂಸ್ಕೃತಿಯ, ಪರಂಪರೆಯ, ಸಮಾಜದ ವಿರುದ್ಧ ದಾಳಿ ಮಾಡಲು ಬಂದಿರುವ ರಾಜಕೀಯ ಪ್ರೇರಿತ ಸಿದ್ಧಾಂತಗಳನ್ನು ಹೊಂದಿರುವ ಅನ್ಯಮತಗಳಿಗೆ ತಕ್ಕ ಉತ್ತರ ಕೊಡಲು ಹುಟ್ಟಿಕೊಂಡಿರುವುದೇ ಹಿಂದುತ್ವ. ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳ ರಾಜಕೀಯ ಆಯಾಮಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಹಿಂದುತ್ವಕ್ಕೆ ಭಾರಿ ಪೆಟ್ಟುಬೀಳಲಿದೆ ಎಂದರು.
https://youtu.be/MF2nPmfdRLg
You must be logged in to post a comment Login