ನೀರಿನ ಟ್ಯಾಂಕ್ ಗೆ ಬಿದ್ದು ಮೃತ ಮಕ್ಕಳ ಕುಟುಂಬಸ್ಥರ ಭೇಟಿ ಮಾಡಿ ಸಾಂತ್ವಾನ ಹೇಳಿದ ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು ಎಪ್ರಿಲ್ 7: ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳದಲ್ಲಿ ಗ್ರಾಮ ಪಂಚಾಯತಿಯ ಟ್ಯಾಂಕಿಗೆ ಬಿದ್ದು ಮೃತರಾದ ಮಕ್ಕಳ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಕುಟಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಜಗದೀಶ್ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಬದ್ರಿನಾಥ್ ಕಾಮತ್ ಹಾಗೂ ಇನ್ನಿತರ ಮುಖಂಡರು ಜೊತೆಗಿದ್ದರು

ಈ ನೀರಿನ ಟ್ಯಾಂಕ್ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳದಲ್ಲಿ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟಿದ್ದು, ಇತ್ತೀಚೆಗಷ್ಟೇ ಹೊಸದಾಗಿ ನಿರ್ಮಿಸಲಾಗಿತ್ತು. ಈ ಮೂವರು ಮಕ್ಕಳು ಮನೆಯಿಂದ ದೂರದಲ್ಲಿ ಬೆಟ್ಟದ ಮೇಲಿರುವ ಟ್ಯಾಂಕ್‌ ನೋಡಲು ಹೋಗಿದ್ದರು. ಟ್ಯಾಂಕ್ ಹತ್ತಲು ಮತ್ತು ಒಳಗೆ ಇಳಿಯಲು ಏಣಿ ಇದ್ದು, ಇದರಲ್ಲಿ ಆಟವಾಡಲು ತೆರಳಿದ್ದ ಸಂದರ್ಭ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದರು.