LATEST NEWS
ಈ ಕೊರೊನಾ, ಕಿರೊನಾ ಏನೋ ಇಲ್ಲ ಎಂದ ಸಂಸದ ಅನಂತ್ ಕುಮಾರ್ ಹೆಗಡೆಗೆ ಕೊರೊನಾ ಸೊಂಕು
ಶಿರಸಿ ಸೆಪ್ಟೆಂಬರ್ 14:ಸಂಸತ್ ಮುಂಗಾರು ಅಧಿವೇಶನ ಇಂದು ಆರಂಭವಾಗಿದ್ದು ಇದಕ್ಕೂ ಮುನ್ನ ಸಂಸದರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಇದರಲ್ಲಿ 17 ಸಂಸದರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಎರಡು ದಿನಗಳ ಹಿಂದೆಯೆ ಕೋವಿಡ್ ದೃಢಪಟ್ಟಿದೆ. ಸೋಮವಾರದಿಂದ ಸಂಸತ್ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಅಲ್ಲಿಗೆ ತಲುಪಿದ ಬಳಿಕ ಎನ್ ಐಸಿಪಿಆರ್ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಅನಂತಕುಮಾರ್ ಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣವಿರಲಿಲ್ಲ. ಹೀಗಾಗಿ ಅವರು ದೆಹಲಿಯ ನಿವಾಸದಲ್ಲಿ ಕ್ವಾರಂಟೈನ್ ಗೊಳಪಟ್ಟಿದ್ದಾರೆ. ಶಿರಸಿಯ ಅವರ ನಿವಾಸಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಕುಟುಂಬದವರ ಗಂಟಲುದ್ರವ ಪರೀಕ್ಷಿಸಿದ್ದು ಅವರೆಲ್ಲರ ವರದಿ ನೆಗೆಟಿವ್ ಬಂದಿದೆ. ಈ ಹಿಂದೆ ಸಮಾರಂಭ ಒಂದರಲ್ಲಿ ಕೊರೊನಾ ಅನ್ನುವುದು ಒಂದು ವ್ಯಾಪಾರ ಎಂದು ಹೇಳಿಕೆ ನೀಡಿದ್ದ ಸಂಸದ ಅನಂತ್ ಕುಮಾರ್ ಹೆಗಡೆ, ಮಾಸ್ಕ್ ಹಾಕಿಕೊಂಡಿರುವರನ್ನು ನೋಡಿದರೆ ರಾಮಾಯಣ ನೆನಪಾಗುತ್ತೆ ಎಂದು ಹೇಳಿ ವಿವಾದ ಸೃಷ್ಠಿಸಿದ್ದರು. ಈಗ ಅವರಿಗೆ ಕೊರೊನಾ ಸೊಂಕು ತಗುಲಿದೆ.
Facebook Comments
You may like
-
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯ ಆರಂಭ
-
ಲಾಕ್ಡೌನ್ ನಂತರ ಮೊದಲ ಬಾರಿಗೆ ‘ಹೌಸ್ಫುಲ್’ ಆದ ಮಂಗಳೂರಿನ ಥಿಯೇಟರ್, ಮಲ್ಟಿಪ್ಲೆಕ್ಸ್ಗಳು
-
ಕೊರೊನಾ ಲಸಿಕೆ ವಿಚಾರದಲ್ಲೂ ಅಪಪ್ರಚಾರ ಮಾಡುತ್ತಿರುವುದು ದುರ್ದೈವ ಸಂಗತಿ
-
ಇವರ ಮಧ್ಯ ಕುಳಿತುಕೊಳ್ಳಲು ಕೊರೋನಾಕ್ಕೂ ಜಾಗ ಇಲ್ಲ….!!
-
ದೇಶದ ವಿವಿಧ ರಾಜ್ಯಗಳತ್ತ ಹೊರಟ ಕೊರೊನಾ ಲಸಿಕೆ ಹೊತ್ತ ಟ್ರಕ್ ಗಳು…!!
-
ರಾಜಕಾರಣಿಗಳು ಕೊರೊನಾ ವಾರಿಯರ್ಸ್ ಅಲ್ಲ..ಅವರಿಗೆ ಮೂರನೇ ಹಂತದಲ್ಲಿ ಲಸಿಕೆ – ಮೋದಿ
You must be logged in to post a comment Login