LATEST NEWS
ಉಡುಪಿ ಕಾಪುವಿನಲ್ಲಿ 2 ವರ್ಷದ ಮಗಳೊಂದಿಗೆ ತಾಯಿ ನಾಪತ್ತೆ..!
ಉಡುಪಿ : 2 ವರ್ಷದ ಮಗಳೊಂದಿಗೆ ತಾಯಿಯೊಂದು ಕಾಣೆಯಾದ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.
ಕಾಪುವಿನ ಮಲ್ಲಾರು ಪಕೀರಣಕಟ್ಟೆಯಲ್ಲಿ ವಾಸವಾಗಿದ್ದ ನಸೀದಾ (27) ತನ್ನ ಎರಡು ವರ್ಷ ಪ್ರಾಯದ ಮಗಳೊಂದಿಗೆ ನಾಪತ್ತೆಯಾಗಿದ್ದು ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಸೀದಾ ಅವರಿಗೆ ವಿಚ್ಛೇದನವಾಗಿದ್ದು,ಕಳೆದೊಂದು ವರ್ಷ ದಿಂದ ಮಗಳೊಂದಿಗೆ ವಾಸವಿದ್ದರು. ಇಪ್ಪತ್ತು ದಿನಗಳಿಂದ ತನ್ನ ಕುಟುಂಬದೊಂದಿಗೆ ಪಕೀರಣಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.ಆಗಸ್ಟ್ 4 ರಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯಲ್ಲಿದ್ದ ಚಿನ್ನ, ಹಣ ಮತ್ತು ಮೊಬೈಲ್ ಅನ್ನು ತೆಗೆದುಕೊಂಡು ತನ್ನ ಮಗಳನ್ನು ಕರೆದುಕೊಂಡು ನಾಪತ್ತೆಯಾಗಿದ್ದಾರೆ.ಮಹಿಳೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಆಕೆಯ ತಾಯಿ ಕಾಪು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
You must be logged in to post a comment Login