LATEST NEWS
ತನ್ನದೇ 9 ತಿಂಗಳ ಮಗುವನ್ನು ಕುತ್ತಿಗೆ ಹಿಡಿದು ಎಸೆದ ಕ್ರೂರಿ ತಾಯಿ….!!
ಶ್ರೀನಗರ: ತನ್ನ ಒಂಬತ್ತು ತಿಂಗಳ ಮಗುವನ್ನು ಮಹಿಳೆಯೊಬ್ಬರು ಮನ ಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಹೃದಯ ವಿದ್ರಾವಕ ವೀಡಿಯೊದಲ್ಲಿ, ಮಹಿಳೆಯು ತನ್ನ ಒಂಬತ್ತು ತಿಂಗಳ ಮಗುವನ್ನು ಹಾಸಿಗೆಯ ಮೇಲೆ ಥಳಿಸುವುದು, ಬಡಿಯುವುದು ಮತ್ತು ಎಸೆಯುವುದನ್ನು ಕಾಣಬಹುದಾಗಿದೆ. ಬಹುಶಃ ಮಹಿಳೆಯ ಸಂಬಂಧಿಯೊಬ್ಬರು ಈ ವಿಡಿಯೋವನ್ನು ಮಾಡಿರಬಹುದು. ಮಹಿಳೆಯ ಪತಿ ಮತ್ತು ಸಾಂಬಾ ಜಿಲ್ಲೆಯ ಬ್ರೀ ಕಮಿಲಾ ಪ್ರದೇಶದ ಸರಪಂಚ್ ಮುಖ್ತಿಯಾರ್ ಸಿಂಗ್ ವೀಡಿಯೊವನ್ನು ನೋಡಿದ ನಂತರ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಂಬಾ ಹಿರಿಯ ಪೊಲೀಸ್ ಅಧೀಕ್ಷಕ ಅಭಿಷೇಕ್ ಮಹಾಜನ್ ಪ್ರಕಾರ, ಮಹಿಳೆಯನ್ನು ಬಂಧಿಸಲಾಗಿದ್ದು ಸಂತ್ರಸ್ತ ಮಗುವನ್ನು ತಂದೆಗೆ ಹಸ್ತಾಂತರಿಸಲಾಗಿದೆ. ಇನ್ನು ಈ ಘಟನೆ ಒಂದು ತಿಂಗಳ ಹಿಂದೆ ನಡೆದಿದೆ ಎಂದು ಹೇಳಿದ್ದಾರೆ.
This woman has been arrested by the #Samba district police in #Jammu region of #JammuAndKashmir after video emerged of her brutally thrashing and torturing a child. pic.twitter.com/CrzjvTNp6n
— Dr.Satwant Singh Rissam, Ph.D (@satwantrissam) April 11, 2022
You must be logged in to post a comment Login