Connect with us

    DAKSHINA KANNADA

    ಕೆರೆಗೆ ಬಿದ್ದ ನಾಲ್ಕು ವರ್ಷದ ಮಗು – ರಕ್ಷಿಸಲು ಹೋದ ತಾಯಿಯೂ ನೀರುಪಾಲು

    ಸುಳ್ಯ ಅಗಸ್ಟ್ 08: ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಯೂ ಸಾವನಪ್ಪಿರುವ ಘಟನೆ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ.


    ಮೃತರನ್ನು ಕೆಮ್ರಾಜೆ ಗ್ರಾಮದ ಮಾಪಲಕಜೆಯ ಸಂಗೀತಾ ಮತ್ತು ಆಕೆಯ ಮಗು‌ ನಾಲ್ಕು ವರ್ಷದ ಅಭಿಮನ್ಯು ಎಂದು ಗುರುತಿಸಲಾಗಿದೆ.

    ಕಳೆದ ಎರಡು ದಿನಗಳ ಹಿಂದೆ ತವರು ಮನೆಗೆ ಪೂಜೆಯ ನಿಮಿತ್ತವಾಗಿ ಬಂದಿದ್ದು, ನಾಳೆ ಮೆಲ್ಕಾರ್​ಗೆ ಹೋಗುವವರಿದ್ದರು. ಪಕ್ಕದ ನೆಂಟರೋರ್ವರ ಮನೆಗೆ ಹೋಗುವಾಗ ಮಗು ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದಿದೆ ಎನ್ನಲಾಗಿದೆ. ಮಗು ಕಾಲು ಜಾರಿ ಬಿದ್ದಾಗ ರಕ್ಷಿಸಲು ಸಂಗೀತಾ ಕೂಡ ಕೆರೆಗೆ ಹಾರಿದ್ದಾರೆ. ಆದರೆ, ಈಜು ಬಾರದ ಅವರು ಮಗುವಿನೊಂದಿಗೆ ಮೃತಪಟ್ಟಿದ್ದಾರೆ. ಸಂಗೀತಾ ಅವರ ಮೃತದೇಹ ಮೇಲೆತ್ತಲಾಗಿದ್ದು, ಮಗುವಿನ ಮೃತದೇಹವನ್ನು ತೆಗೆಯುವ ಪ್ರಯತ್ನ ನಡೆಯುತ್ತಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply