ಮಂಗಳೂರಿನ ಈ ಬೃಹತ್ ಕಾಮಗಾರಿಗೆ ಇದೇ ಡಿಸೆಂಬರ್ ಗಡುವು…!

ಮಂಗಳೂರು ನವೆಂಬರ್ 16: ದಶಕಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಮಂಗಳೂರಿನ ಪಂಪ್ ವೆಲ್ ಸೇತುವೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಂದು ಗಡುವು ನೀಡಿದ್ದು, ಇದೇ ತಿಂಗಳ ಡಿಸೆಂಬರ್ ನಲ್ಲಿ ಕಾಮಗಾರಿ ಮುಗಿದು ಜನವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಕಾಮಾಗಾರಿ ನಡೆಯುತ್ತಿರುವ ಪಂಪ್‌ವೆಲ್ ಪ್ರದೇಶಕ್ಕೇ ಭೇಟಿ ನೀಡಿ ಕಾಮಾಗಾರಿ ವೀಕ್ಷಣೆ ನಡೆಸಿ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಶಿಶು ಮೋಹನ್ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ಹೆದ್ದಾರಿ ಕಾಮಗಾರಿಗೆ ಇದುವರೆಗೆ ಇದ್ದ ವಿವಿಧ ರೀತಿಯ ಅಡೆತಡೆಗಳು ನಿವಾರಣೆಯಾಗಿವೆ. ಕಾಮಾಗಾರಿ ಸುಸೂತ್ರವಾಗಿ ಮುನ್ನಡೆಯುತ್ತಿದ್ದು ಭರದಿಂದ ಸಾಗುತ್ತಿದೆ. ಇದೇ ಡಿಸೆಂಬರ್ 31 ರಂದು ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, 2020 ಜನವರಿ 1 ರಂದು ಮಂಗಳೂರು ಜನತೆಯ ಭಾರಿ ನಿರೀಕ್ಷೆಯ ನೂತನ ಫ್ಲೈ ಒವರ್ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಿದೆ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ 8 ಬಾರಿ ಪಂಪ್ ವೆಲ್ ಸೇತುವೆ ಕಾಮಗಾರಿ ಮುಗಿಸಲು ಸಂಸದರು ಗಡುವು ನೀಡಿದ್ದರೂ ಯಾವುದೇ ಫಲಿತಾಂಶ ಬಂದಿರಲಿಲ್ಲ. ಮತ್ತೆ ಈ ಬಾರಿ ಗಡುವು ನೀಡಿದ್ದು, ಕಾಮಗಾರಿ ಮುಗಿಯಲಿದೆಯೇ ನೋಡಬೇಕಿದೆ.

Facebook Comments

comments