ಮಂಗಳೂರು ಡಿಸೆಂಬರ್ 02: ಮೂಡುಶೆಡ್ಡೆ ಪಂಚಾಯತ್ ಎದುರು ತಾಯಿ ಮತ್ತು ಮಗಳ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಇದೀಗ ಹಲ್ಲೆಗೊಳಗಾದ ತಾಯಿಯ ನೆರವಿಗೆ ಮಹಿಳಾ ಸಂರಕ್ಷಣಾ ವೇದಿಕೆ ಮುಂದಾಗಿದ್ದು, ಮಗಳು ನೇತ್ರಾವತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

ಹಿರಿಯ ನಾಗರಿಕರಾಗಿರುವ ನಿರ್ಮಲಾ ಅವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಮಗಳ ವಿರುದ್ಧ ದೂರು ದಾಖಲಿಸುತ್ತಿರುವುದಾಗಿ ಸಂಘಟನೆ ತಿಳಿಸಿದೆ. ಸಾಮಾಜಿಕ ಚಿಂತಕಿ ರಮಿತಾ ಸೂರ್ಯವಂಶಿ ಮತ್ತು ಹಿಂದೂ ಜಾಗರಣ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ದೀಕ್ಷಿತ್ ಈ ಸಂದರ್ಭ ಉಪಸ್ಥಿತರಿದ್ದರು.
ತಾಯಿಯ ಮೇಲೆ ಮಗಳು ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು