ಮಂಗಳೂರು ಸೆಪ್ಟೆಂಬರ್ 08: ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಯೇಸು ಕ್ರಿಸ್ತರ ಜನ್ಮದಾತೆ ಮಾತೆ ಮರಿಯಮ್ಮನ ಜನ್ಮದಿನವನ್ನು ಇಂದು ದಕ್ಷಿಣ ಕನ್ನಡದಲ್ಲಿ ಶ್ರದ್ದೆ ಭಕ್ತಿಯಿಂದ ಆಚರಿಸಲಾಯಿತು.ಇಂದು ಮುಂಜಾನೆಯಿಂದಲೇ ಚರ್ಚಗಳಲ್ಲಿ ವಿಶೇಷ ಪೂಜೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಚರ್ಚ್ಗೆ ತೆರಳಿದ ಭಕ್ತರು ಮಾತೆ ಮರಿಯಮ್ಮನಿಗೆ ಹೂವನ್ನು ಅರ್ಪಿಸುತ್ತಾ ವಂದಿಸಿದರು. ಅಲ್ಲದೆ ಕರಾವಳಿಯ ಜನತೆ ಇದೇ ದಿನ ತೆನೆ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.


ಇ೦ದು ಶಾ೦ತಿ ದೂತ ಏಸುಕ್ರಿಸ್ತನ ತಾಯಿ ಮಾತೆ ಮರಿಯಮ್ಮಜನ್ಮದಿನ. ಮಾತೆ ಮರಿಯಮ್ಮನ ಜನ್ಮದಿನವನ್ನು ಪ್ರಪಂಚದಾದ್ಯಂತ ಕ್ರೈಸ್ತ ಭಾ೦ಧವರು ಶ್ರದ್ದಾ ಭಕ್ತಿಯಿಂದ ಆಚರಿಸಿದರು. ಅದೇ ರೀತಿ ದಕ್ಷಿಣ ಕನ್ನಡದಲ್ಲೂ ಇಂದು ಮಾತೆ ಮರಿಯಮ್ಮನ ಜನ್ಮ ದಿನವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಇಂದು ಮುಂಜಾನೆಯಿಂದಲೇ ಚರ್ಚಗಳಲ್ಲಿ ವಿಶೇಷ ಪೂಜೆ ನೆರವೇರಿತು. ಅಲ್ಲದೆ ಭಕ್ತರು ಮಾತೆ ಮರಿಯಮ್ಮನಿಗೆ ಹೂವನ್ನು ಅರ್ಪಿಸಿ ವಂದಿಸಿದರು. ಹಬ್ಬ ಆಚರಣೆಗೆ ಮೊದಲು ಒ೦ಭತ್ತು ದಿನಗಳ ಕಾಲ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತವೆ. ಈ ಸಮಯದಲ್ಲಿ ಮಕ್ಕಳು, ಹೆತ್ತವರು ತಮ್ಮ ಮನೆಗಳ ಹೂತೋಟಗಳಿ೦ದ ಸ೦ಗ್ರಹಿಸಿದ ಬಣ್ಣ ಬಣ್ಣದ ಹೂವುಗಳನ್ನು ಮಾತೆ ಮರಿಯಮ್ಮ ಅವರಿಗೆ ಅರ್ಪಿಸುವ ಮೂಲಕ ಮರಿಯಮ್ಮನಿಗೆ ವಂದಿಸುವುದು ವಿಶೇಷ.


ಕರಾವಳಿ ಪ್ರದೇಶದ ಕ್ರೈಸ್ತ ಭಾಂದವರು ಈ ದಿನವನ್ನು ವಿಶೇಷವಾಗಿ ತೆನೆ ಹಬ್ಬವನ್ನಾಗಿ ಆಚರಿಸುತ್ತಾರೆ. ಶ್ರಮ ಜೀವಿಗಳೆಂದು ಹೆಸರು ಪಡೆದ ಕ್ರೈಸ್ತ ಕೃಷಿ ಭಾ೦ದವರು ತಮ್ಮಗದ್ದೆ, ತೋಟಗಳಲ್ಲಿ ಬೆಳೆದ ಹೊಸ ಬೆಳೆ ಮತ್ತು ಧವಸ ಧಾನ್ಯಗಳನ್ನು ಕಠಾವು ಮಾಡಿ ಮೊದಲು ದೇವರಿಗೆ ಆರ್ಪಿಸುತ್ತಾರೆ. ಬಳಿಕ ಭತ್ತವನ್ನು ಮನೆಗೆ ತಂದು ಮನೆಯಲ್ಲಿ ಪ್ರಾರ್ಥನೆ ನಡೆಸಿ ಭತ್ತವನ್ನು ಹಾಲಿನೊಂದಿಗೆ ಬೆರಸಿ ಕುಡಿಯುತ್ತಾರೆ. ಅಲ್ಲದೆ ವಿವಿಧ ಬಗೆಯ ತರಕಾರಿಯ ಪದಾರ್ಥವನ್ನು ಮಾಡಿ ಮನೆ ಮಂದಿಯೆಲ್ಲ ಒಟ್ಟಿಗೆ ಕೂತ ಊಟ ಮಾಡಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಅಲ್ಲದೆ ದೂರದೂರಿನಲ್ಲಿರುವ ತಮ್ಮ ಬಂಧುಗಳಿದೆ ಅಕ್ಕಿ ಕಾಳನ್ನು ಅಂಚೆಯ ಮೂಲಕ ಕಳುಹಿಸುವುದು ಸಂಪ್ರದಾಯ. ಇದು ಕ್ರೈಸ್ತ ಬಾಂಧವರ ಮೊದಲ ಭೋಜನ ಎಂಬುದು ವಿಶೇಷ.


ಕರಾವಳಿ ಕ್ರೈಸ್ತ ಬಾಂಧವರು ಬೆರೆಲ್ಲ ಹಬ್ಬದಲ್ಲೂ ಮಾಂಸಹಾರ ಭೋಜನವನ್ನು ಸವಿದರೆ ಮಾತೆ ಮರಿಯಮ್ಮನ ಹಬ್ಬದಲ್ಲಿ ಮಾತ್ರ ಸಸ್ಯಹಾರ ಭೋಜನವನ್ನು ತಯಾರಿಸಿ ಪ್ರಥಮ ಬೋಜನವಾಗಿ ಆಹಾರವನ್ನು ಸೇವಿಸುವುದು ಈ ಹಬ್ಬದ ವಿಶೇಷ

Share Information