LATEST NEWS
ಖಾಸಗಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಆರೆಸ್ಟ್ – ಪೊಲೀಸರ ಎದುರೇ ಕಪಾಳಕ್ಕೆ ಬಾರಿಸಿದ ಯುವತಿ
ಮಂಗಳೂರು ಜನವರಿ 21: ಮಂಗಳೂರಿನ ಖಾಸಗಿ ಬಸ್ ನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡು ನಿವಾಸಿ ಹುಸೇನ್ (41) ಎಂದು ಗುರುತಿಸಲಾಗಿದ್ದು, ಈತ ಜನವರಿ 14 ರಂದು ದೇರಳಕಟ್ಟೆ-ಮಂಗಳೂರು ಮಾರ್ಗದ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಕುರಿತಂತೆ ಈ ಘಟನೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ತನಗಾದ ಕಿರುಕುಳದ ಬಗ್ಗೆ ಪೋಸ್ಟ್ ಮಾಡಿದ್ದಳು. ಅಲ್ಲದೆ ಆರೋಪಿ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಳು.
ಜನವರಿ 14 ರಂದು ಮಂಗಳೂರಿನ ದೇರಳಕಟ್ಟೆ – ಮಂಗಳೂರು ಮಾರ್ಗದ ಖಾಸಗಿ ಬಸ್ ಒಂದರಲ್ಲಿ ಯುವತಿ ಆಕೆಯ ಪಕ್ಕದಲ್ಲೇ ಕುಳಿತುಕೊಂಡ ಕಾಮುಕ, ಯುವತಿಗೆ ದೈಹಿಕ ಕಿರುಕುಳ ನೀಡಿದ್ದಾನೆ. ಯುವತಿ ವಿರೋಧ ವ್ಯಕ್ತಪಡಿಸಿದ ಮೇಲೆ ಬಸ್ನಿಂದ ಕೆಳಗಿಳಿದ ಆರೋಪಿ, ಮತ್ತೊಂದು ಬಸ್ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಮತ್ತೆ ಕಿರುಕುಳ ಮತ್ತೆ ಯುವತಿ ಪಕ್ಕದಲ್ಲೇ ಕೂತು ಅಸಭ್ಯವಾಗಿ ವರ್ತಿಸಿದ್ದಾನೆ.
ಬಸ್ನಲ್ಲಿ ಕಾಮುಕನೊಬ್ಬ ಹಾಡಹಗಲೇ ಯುವತಿಗೆ ಕಿರುಕುಳ ನೀಡಿದ್ದು, ರಕ್ಷಣೆಗಾಗಿ ಯುವತಿ ಚೀರಾಡಿದರೂ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ! ಕೂಡಲೇ ಆ ಬಸ್ನಿಂದ ಇಳಿದು ಮತ್ತೊಂದು ಬಸ್ನಲ್ಲಿ ಹಿಂಬಾಲಿಸಿಕೊಂಡು ಬಂದವ ಮತ್ತೆ ಆಕೆಯೊದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆ ವೇಳೆ ಆತನ ಫೊಟೋಗಳನ್ನು ತೆಗೆದ ಸಂತ್ರಸ್ತ ಯುವತಿ, ಇನ್ಸ್ಟಾಗ್ರಾಂನಲ್ಲಿ ಹಾಕಿ ಆ ಘಟನೆ ಬಗ್ಗೆ ವಿವರಿಸಿದ್ದಾರೆ.
ಯುವತಿಯ ಪೋಸ್ಟ್ ಆಧಾರದ ಮೇರೆಗೆ ಕಾಸರಗೋಡು ನಿವಾಸಿ ಹುಸೇನ್ (41) ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗೆ ಪೊಲೀಸ್ ಕಮೀಷನರ್ ಎದುರೇ ಯುವತಿ ಕಪಾಳಕ್ಕೆ ಬಾರಿಸಿದ್ದಾಳೆ. ಯುವತಿಯ ದಿಟ್ಟ ಕ್ರಮಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Facebook Comments
You may like
ಮದುವೆ ಮಂಟಪವಾಗಿ ಬದಲಾದ ಜೈಲು…!
ಐಶಾರಾಮಿ ಕಾರು ಮಾರಾಟ ಪ್ರಕರಣ – ಎಸ್ಐ ಕಬ್ಬಾಳರಾಜ್, ಇನ್ ಸ್ಪೆಕ್ಟರ್ ರಾಮಕೃಷ್ಣ ಸಸ್ಪೆಂಡ್
ಹಾಡುಹಗಲೇ ದರೋಡೆಗೆ ಬಂದವರು ಅಗ್ನಿಶಾಮಕ ದಳದ ಸೈರನ್ ಕೇಳಿ ಎಸ್ಕೇಪ್…!!
ಸಿಸಿಬಿ ಪೊಲೀಸರ ವಿರುದ್ದ ಸಿಐಡಿ ತನಿಖೆ ಆರಂಭ.. ಆರೋಪಿಗಳು ಇನ್ನೂ ಕರ್ತವ್ಯದಲ್ಲಿ…!!
ಮತ್ತೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ.. ಫೆಬ್ರವರಿಯಲ್ಲಿ ಇದು 16ನೇ ಬಾರಿ
ಡಿಎಸ್ಪಿಯಾಗಿ ಚಿನ್ನದ ಓಟಗಾರ್ತಿ ‘ಹಿಮದಾಸ್’ ಅಧಿಕಾರ ಸ್ವೀಕಾರ
You must be logged in to post a comment Login