Connect with us

    LATEST NEWS

    ಕಳ್ಳರು, ಕಳ್ಳಸಾಗಾಟಗಾರರನ್ನು ಸೃಷ್ಠಿಸುವ ವಿಶ್ವವಿದ್ಯಾಲಯಗಳು ಹೆಚ್ಚುತ್ತಿವೆ – ಮೋಹನ್ ಭಾಗವತ್

    ಕಳ್ಳರು, ಕಳ್ಳಸಾಗಾಟಗಾರರನ್ನು ಸೃಷ್ಠಿಸುವ ವಿಶ್ವವಿದ್ಯಾಲಯಗಳು ಹೆಚ್ಚುತ್ತಿವೆ – ಮೋಹನ್ ಭಾಗವತ್

    ಪುತ್ತೂರು ಮಾರ್ಚ್ 27: ಶೇಷ್ಠ ವ್ಯಕ್ತಿಗಳನ್ನು ಸೃಷ್ಠಿಸುವ ವಿಶ್ವವಿದ್ಯಾನಿಲಯಗಳು ಕಡಿಮೆಯಾಗುತ್ತಿದ್ದು, ಕಳ್ಳರು, ಕಳ್ಳ ಸಾಗಾಟಗಾರರನ್ನು ಸೃಷ್ಠಿಸುವ ವಿಶ್ವವಿದ್ಯಾಲಯಗಳು ಹೆಚ್ಚಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘಚಾಲಕ್ ಮೋಹನ್ .ಜಿ.ಭಾಗವತ್ ಹೇಳಿದರು.

    ವಿಟ್ಲದ ಮೈತ್ರೇಯಿ ಗುರುಕುಲದ ಅರ್ಧಮಂಡಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಷ್ಯ ಹಾಗೂ ಗುರುವಿನ ನಡುವಿನ ಸಂಬಂಧ ಅವಿನಾಭಾವವಾಗಿದ್ದು, ಕಲಿಸುವುದನ್ನು ಕಲಿಯುವುದು ಬಿಟ್ಟು, ತೋರಿಸುವುದನ್ನು ಕಲಿಯುವುದನ್ನು ಶಿಷ್ಯ ಮಾಡುತ್ತಾನೆ ಎಂದ ಅವರು  ಆಧ್ಯಾತ್ಮಿಕದ ವಿನಹ ಶಿಕ್ಷಣ ಅಪೂರ್ಣವಾಗಿದೆ ಎಂದರು. ವಿದೇಶೀಯರ ಆಳ್ವಿಕೆ ಸಂದರ್ಭ ಅವರಿಗೆ ಬೇಕಾದ ಶಿಕ್ಷಣ ಪದ್ಧತಿಯನ್ನು ದೇಶದಲ್ಲಿ ಜಾರಿಗೆ ತರುವ ಮೂಲಕ ಆ ಶಿಕ್ಷಣದ ಲಾಭವನ್ನು ಅವರು ಬಳಸಿಕೊಂಡಿದ್ದರು. ಭಾರತೀಯ ಶಿಕ್ಷಣ ಪದ್ದತಿಯ ಪುನರ್ ರಚನೆ ಪ್ರಸ್ತುತ ಅಗತ್ಯತೆಯ ವಿಚಾರವಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ಉದ್ಯಮ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಮೋಹನ್ ಭಾಗವತ್ ಸನ್ಮಾನಿಸಿದರು. ಗುರುಕುಲದ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.

    Share Information
    Advertisement
    Click to comment

    You must be logged in to post a comment Login

    Leave a Reply