Connect with us

    LATEST NEWS

    ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ…ಪ್ರಧಾನಿ ಹಳೆ ವಿಡಿಯೋ ವೈರಲ್…!!

    ನವದೆಹಲಿ ಜುಲೈ 18: ಆಹಾರ ಪದಾರ್ಥ ಹಾಗೂ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ ಹೇರಿರುವ ವಿಚಾರವಾಗಿ ಇದೀಗ ಆಕ್ರೋಶ ವ್ಯಕ್ತವಾಗಿದ್ದು, ಜಿಎಸ್ ಟಿ ಜಾರಿ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಜಿಎಸ್ ಟಿ ಮಂಡಳಿ ಹಾಲು ಮೊಸರು ಸೇರಿದಂತೆ ಬಹುತೇಕ ಆಹಾರ ಪದಾರ್ಥಗಳ ಮೇಲೆ ಜಿಎಸ್ ಟಿ ಹೇರಿದ್ದು, ಕೇಂದ್ರ ಸರಕಾರದ ಈ ಕ್ರಮದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.


    ಆದರೆ ಈ ಹಿಂದೆ ಜಿಎಸ್ ಟಿ ಜಾರಿ ವೇಳೆ ಇದೇ ವಿಚಾರವಾಗಿ ಮಾತನಾಡಿದ್ದ ಪ್ರಧಾನಿ ಮೋದಿ, ಇಷ್ಟು ಅಕ್ಕಿ, ಬೇಳೆ, ಮೊಸರಿನ ಮೇಲೆಯೂ ತೆರಿಗೆ ಹೇರಲಾಗುತ್ತಿತ್ತು. ಆದರೆ ಇದೀಗ ಜಿಎಸ್ ಟಿ ಜಾರಿ ಬಳಿಕ ಅವು ತೆರಿಗೆ ಮುಕ್ತವಾಗಲಿವೆ ಎಂದು ಹೇಳಿದ್ದರು.
    ಆದರೆ ಇದೀಗ ಮತ್ತೆ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ ಹೇರಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮಾತು ತಪ್ಪಿದರೇ ಎಂಬ ಪ್ರಶ್ನೆ ಮೂಡುತ್ತಿದೆ. ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ವಿಡಿಯೋ ಕೂಡ ವೈರಲ್ ಆಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply