Connect with us

    LATEST NEWS

    ಮಂಗಳೂರಿನ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ರದ್ದು – ರೋಡ್ ಶೋ ಮಾತ್ರ

    ಮಂಗಳೂರು ಎಪ್ರಿಲ್ 10: ಎಪ್ರಿಲ್ 14 ರಂದು ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಕೊನೆಯ ಕ್ಷಣದಲ್ಲಿ ರದ್ದಾಗಿದ್ದು, ಇದೀಗ ಸಮಾವೇಶದ ಬದಲಾಗಿ ಮಂಗಳೂರಿನಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.

    ಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವುದಕ್ಕೆ ಬಿಜೆಪಿ ಸಿದ್ದತೆ ನಡೆಸಿತ್ತು. ಕರಾವಳಿಯ ಎರಡು ಜಿಲ್ಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಅಭ್ಯರ್ಥಿಗಳಲ್ಲಿ ಹೊಸ ಹುರುಪು ತಂದಿತ್ತು, ಅಲ್ಲದೆ ಬಿಜೆಪಿ ಕೂಡ ದಾಖಲೆ ಮಟ್ಟದಲ್ಲಿ ಜನರನ್ನು ಸೇರಿಸುವುದಾಗಿ ಹೇಳಿತ್ತು, ಇಂದು ಬೆಳಗ್ಗೆ ಮೈದಾನದಲ್ಲಿ ಚಪ್ಪರ ಮುಹೂರ್ತವನ್ನೂ ನಡೆಸಲಾಗಿತ್ತು. ಜರ್ಮನ್ ನಿರ್ಮಿತ ಬೃಹತ್ ಪೆಂಡಾಲ್ ಹಾಕಲು ಸಿದ್ಧತೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ ತಾಂತ್ರಿಕ ಕಾರಣದಿಂದಾಗಿ ಬೃಹತ್ ಸಮಾವೇಶ ನಡೆಸುವುದನ್ನು ರದ್ದು ಪಡಿಸಲಾಗಿದೆ. ಸಮಾವೇಶ ನಡೆಸುವ ಬದಲು ಕೇವಲ ರೋಡ್ ಶೋ ನಡೆಸುವುದಕ್ಕೆ ಆದ್ಯತೆ ನೀಡಲಾಗಿದೆ. ಸದ್ಯ ರೋಡ್ ಶೋ ಎಲ್ಲಿ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply