Connect with us

DAKSHINA KANNADA

ಮಂಗಳೂರಿಗರನ್ನು ನಿರಾಸೆಗೊಳಿಸಿದ ಮೋದಿ ಮನ್ ಕೀ ಬಾತ್

ಮಂಗಳೂರಿಗರನ್ನು ನಿರಾಸೆಗೊಳಿಸಿದ ಮೋದಿ ಮನ್ ಕೀ ಬಾತ್

ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಜನರನ್ನು ನಿರಾಸೆಗೊಳಿಸಿದ ಘಟನೆ ಇಂದು ಮಂಗಳೂರಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ಜನರಿಗೆ ತಪ್ಪು ಮಾಹಿತಿ ನೀಡಿದ್ದೇ ಈ ಘಟನೆಗೆ ಕಾರಣವಾಗಿದೆ.

ಪ್ರಧಾನಿ ಮೋದಿ ಅವರ ಮನ್ ಕಿ ವಾತ್ ಕಾರ್ಯಕ್ರಮವನ್ನು ವೀಡಿಯೋ ಸಂವಾದ ಅಂತ ಹೇಳಿ ಜಿಲ್ಲಾ ಬಿಜೆಪಿ ಘಟಕ ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸಿತ್ತು.

ಇದರಿಂದ ಪ್ರಧಾನಿ ಅವರೊಂದಿಗೆ ಮಾತನಾಡುವ ಅವಕಾಶದ ಆಸೆಯಿಂದ ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ಜನರಿಗೆ ನಿರಾಸೆಯಾಯಿತು.

ನಗರದ ಟಿ.ವಿ. ರಮಣ ಪೈ ಹಾಲ್‍ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಬಿಜೆಪಿ ಕೂಡಾ ಎಲ್ ಇ ಡಿ ಸ್ಕ್ರೀನ್ ಅಳವಡಿಸಿತ್ತು.

ಹಾಲ್ ಜನರಿಂದ ತುಂಬಿ ಹೋಗಿತ್ತು. ಕಾರ್ಯಕ್ರಮ ಕೇವಲ 20 ನಿಮಿಷದ ಒಳಗೆ ಮುಗಿದಿದ್ದು, ಧ್ವನಿ ಮುದ್ರಿತ ವೀಡಿಯೋ ಮಾತ್ರ ಪ್ರಸಾರಗೊಂಡಿದೆ.

ಇದರಿಂದ ಪ್ರಧಾನಿ ಅವರೊಂದಿಗೆ ಮಾತನಾಡಲು, ಪ್ರಶ್ನೆ ಕೇಳಲು ಬಂದ ಜನ ಕೂಡ ನಿರಾಸೆಗೊಂಡಿದ್ದಾರೆ.

ಆಡಿಯೋ ಕೇಳಲು ಬಂದ ಜನ ಮೊಬೈಲ್ ಸೆಲ್ಫಿ ತೆಗೆದುಕೊಳ್ಳುತ್ತಾ ಟೈಂ ಪಾಸ್ ಮಾಡಿದ್ದಾರೆ.

ಆದರೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಾತ್ರ ತಪ್ಪನ್ನು ದೂರದರ್ಶನದ ಮೇಲೆ ಹೊರಿಸಿದ್ದು ತಾಂತ್ರಿಕ ಸಮಸ್ಯೆ ಅಂತ ಸಮಜಾಯಿಷಿ ನೀಡಿದ್ದು ಮಾತ್ರ ವಿಚಿತ್ರವಾದರೂ ಸತ್ಯ..