Connect with us

    LATEST NEWS

    ಮೊಬೈಲ್ ಕದಿಯಲು ಬಂದು ರೈಲು ಕಿಟಕಿಯಲ್ಲಿ ಸಿಕ್ಕಿಬಿದ್ದ ಕಳ್ಳ….!!

    ಪಟನಾ: ರೈಲು ಪ್ರಯಾಣಿಕರ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದ ಕಳ್ಳನೊಬ್ಬ ಅಚಾನಕ್ಕಾಗಿ ಪ್ರಯಾಣಿಕರ ಕೈಗೆ ಸಿಲುಕಿ 10 ಕಿ.ಮೀ. ನಷ್ಟು ರೈಲು ಕಿಟಕಿ ಹಿಡಿದು ಜೋತಾಡುತ್ತ ಸಾಗಿದ ಘಟನೆ ಬಿಹಾರದಲ್ಲಿ ನಡೆದಿದೆ. ಸೆಪ್ಟೆಂಬರ್ 14ರಂದು ಈ ಘಟನೆ ಬಿಹಾರದಲ್ಲಿ ನಡೆದಿತ್ತು ಎನ್ನಲಾಗಿದೆ.

    ಬೇಗುಸ ರಾಮ್‌ಯಿಂದ ಖಗಾರಿಯಾಗೆ ರೈಲು ಪ್ರಯಾಣ ನಡೆಸುತ್ತಿತ್ತು. ಸಾಹೇಬ್ ಕಮಲ್ ನಿಲ್ದಾಣದ ಬಳಿ ರೈಲು ನಿಂತಾಗ ಕಳ್ಳ, ಪ್ಲಾಟ್‌ಫಾರ್ಮ್‌ನಿಂದಲೇ ಕಿಟಕಿಯೊಳಗೆ ಕೈ ಹಾಕಿ ಪ್ರಯಾಣಿಕರ ಮೊಬೈಲ್‌ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ತಕ್ಷಣ ಕಳ್ಳನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಪ್ರಯಾಣಿಕರು ರೈಲು ಹೊರಟರೂ ಕೈ ಬಿಟ್ಟಿಲ್ಲ. ಇದರಿಂದ ರೈಲಿನ ಹೊರಗೆ ಕಳ್ಳ ನೇತಾಡುವಂತಾಗಿದೆ. ಕಳ್ಳ ಕ್ಷಮಾಪಣೆ ಕೇಳುತ್ತ ಗೋಗರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 10 ಕಿ.ಮೀ. ಹೀಗೆ ರೈಲಿನಿಂದ ಹೊರಭಾಗದಲ್ಲಿ ನೇತಾಡುತ್ತ ಹೋಗಿದ್ದು, ಖಗಾರಿಯಾ ಸಮೀಪ ಪ್ರಯಾಣಿಕರು ಆತನ ಕೈಬಿಟ್ಟಿದ್ದಾರೆ. ಬಳಿಕ ಕಳ್ಳ ಓಡಿ ಪರಾರಿಯಾಗಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply