Connect with us

LATEST NEWS

ಕಂಟೈನರ್ ಲಾರಿ ಅಡ್ಡಗಟ್ಟಿ 15 ಕೋಟಿ ವೆಚ್ಚದ ಮೊಬೈಲ್ ಲೂಟಿ

ತಮಿಳುನಾಡು, ಅಕ್ಟೋಬರ್ 22: ಕಂಟೈನರ್ ಲಾರಿ ಅಡ್ಡಗಟ್ಟಿ 15 ಕೋಟಿ ರೂ. ವೆಚ್ಚದ ಮೊಬೈಲ್ ಗಳನ್ನು ಲೂಟಿ ಮಾಡಿದ ಸಿನಿಮಯ ಘಟನೆ ಹೊಸೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ತಮಿಳುನಾಡಿನ ಶ್ರೀಪೆರಂಬದರೂರಿನಿಂದ ಮುಂಬೈನತ್ತ ಸಾಗುತ್ತಿದ್ದ ಕಂಟೈನರ್ ಲಾರಿಯಲ್ಲಿ ಎಂಐ (ಶಿಯೋಮಿ) ಕಂಪನಿಯ ಮೊಬೈಲ್ ಗಳನ್ನು ಸಾಗಿಸಲಾಗುತ್ತಿತ್ತು. ಹೊಸೂರು ಬಳಿ ಮೇಲು ಮಲೈ ಅರಣ್ಯ ಪ್ರದೇಶದ ಸಮೀಪ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಲಾರಿ ಅಡ್ಡಗಟ್ಟಿದ ತಂಡವೊಂದು 15 ಕೋಟಿ ರೂ. ವೆಚ್ಚದ ಮೊಬೈಲ್ ಗಳನ್ನು ದರೋಡೆ ಮಾಡಿದೆ.

ಲಾರಿ ಚಾಲಕ ಮತ್ತು ಜೊತೆಗಿದ್ದ ವ್ಯಕ್ತಿಯನ್ನು ದರೋಡೆಕೋರರು ಕಾಡಿನ ಒಳಗೆ ಎಳೆದೊಯ್ದು ಮರಕ್ಕೆ ಕಟ್ಟಿ ಹಾಕಿ ಲಾರಿಯಲ್ಲಿದ್ದ 14,500 ಮೊಬೈಲ್ ಗಳನ್ನು ಬೇರೆ ಲಾರಿಗೆ ಸ್ಥಳಾಂತರಿಸಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಸೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.