ಲಾರಿ ಚಾಲಕರಿಂದ ಮೊಬೈಲ್ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ

ಮಂಗಳೂರು ಜನವರಿ 13: ಪಣಂಬೂರು ಮತ್ತು ಸುರತ್ಕಲ್ ಪರಿಸರದಲ್ಲಿ ನಿಲ್ಲಿಸಿದ್ದ ಲಾರಿಗಳ ಚಾಲಕ/ನಿರ್ವಾಹಕರಿಗೆ ಚೂರಿಯಿಂದ ಇರಿದು ಬೆದರಿಸಿ ಮೊಬೈಲ್ ಗಳನ್ನು ದರೋಢೆ ಮಾಡುತ್ತಿದ್ದ ಮತ್ತು ಕುಳಾಯಿಯ ರಾ.ಹೆ. 66 ಬದಿಯಲ್ಲಿ ನಿಲ್ಲಿಸಿದ್ದ ಜನರೇಟರ್ ಗಳಿಂದ (ಡಿ.ಜೆ. ) ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ತಂಡ ವನ್ನು ದಸ್ತಿಗಿರಿ ಮಾಡುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಯಶಸ್ವಿಯಾಗಿರುತ್ತಾರೆ. ಬಂಧಿತರು ಮಂಗಳೂರು ನಿವಾಸಿಗಳಾದ ಅಬ್ದುಲ್ ಅಮೀರ್ , ಅಬ್ದುಲ್ ಬಿಲಾಲ್ , ತನ್ವೀರ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಇತ್ತೀಚೆಗೆ ವಿಜಯಪುರ ಜಿಲ್ಲೆಯ ನಿವಾಸಿ 56 ವರ್ಷ ಪ್ರಾಯದ ಶಂಶುದ್ದೀನ್ ಅಶಾಂಫಿರ್ ಮುಜಾವರ್ ರವರು ಪಣಂಬೂರು ನಂದನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಮಲಗಿದ್ದ ಸಂಧರ್ಭ ಮೂರು ಆರೋಪಿಗಳು ಚಾಕುತೋರಿಸಿ ಹೆದರಿ ಅವರಲ್ಲಿ ಇರುವ ಮೊಬೈಲ್ ಮತ್ತು ಹಣವನ್ನು ನೀಡುವಂತೆ ಬೆದರಿಸಿದ್ದು ಮೊಬೈಲ್ ಕೊಡಲು ನಿರಾಕರಿಸಿದ್ದಕ್ಕೆ ಚಾಲಕರ ಹಣೆಗೆ ಚಾಕುವಿನಿಂದ ತಿವಿದು ಗಾಯಗೊಳಿಸಿ ಮೊಬೈಲ್ ನ್ನು ಕಿತ್ತು ಪರಾರಿಯಾಗಿದ್ದರು. ಘಟನೆ ಕುರಿತಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 1 ಮೊಬೈಲ್ , 2 ದ್ವಿಚಕ್ರ ಹಾಗೂ 1 ಗೂಡ್ಸ್ ಟೆಂಪೋ 6 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments

comments