ಬೆಂಗಳೂರು ಸೆಪ್ಟೆಂಬರ್ 15: ಸೈಬರ್ ವಂಚಕರು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಹಣ ಬೇಡಿಕೆ ಇಡುತ್ತಿದ್ದ ಕಾಲ ಇದೀಗ ಬದಲಾಗಿದ್ದು, ಅದರ ಬದಲಿಗೆ ಮೊಬೈಲ್ ನ್ನೆ ಹ್ಯಾಕ್ ಮಾಡಿ ನಿಮ್ಮದೇ ಮೊಬೈಲ್ ನಿಂದ ಹಣ ವಸೂಲಿ ಮಾಡುವ ತಂತ್ರಜ್ಞಾನಕ್ಕೆ ಬಂದಿದ್ದಾರೆ. ಇದೇ ರೀತಿ ವಂಚನೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬ ಸಿಕ್ಕಿ ಹಾಕಿಕೊಂಡಿದ್ದು, ಸುಮಾರು 55 ಸಾವಿರ ಹಣ ಕಳೆದುಕೊಂಡಿದ್ದಾರೆ.


ಈ ಕುರಿತಂತೆ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಉಪೇಂದ್ರ ಹಾಗೂ ಪ್ರಿಯಾಂಕ ನಮ್ಮಿಬ್ಬರ ಫೋನ್ ಹ್ಯಾಕ್ ಆಗಿದೆ. ಯಾರಾದರೂ ನಮ್ಮ ಹೆಸರಲ್ಲಿ ಹಣ ಕೇಳಿದರೆ ಕೊಡಬೇಡಿ ಎಂದಿದ್ದಾರೆ.

ಆನ್‌ಲೈನ್‌ನಲ್ಲಿ ವಸ್ತುವೊಂದನ್ನ ಪ್ರಿಯಾಂಕಾ ಆರ್ಡರ್ ಮಾಡಿದ್ರಂತೆ, ಬಳಿಕ ಹ್ಯಾಕರ್ ಒಬ್ಬ ಫೋನ್ ಮಾಡಿ ಹ್ಯಾಶ್‌ ಒತ್ತಿ, ಆ ನಂಬರ್, ಈ ನಂಬರ್ ಒತ್ತಿ ಎಂದು ಹೇಳಿ ಕನ್‌ಫ್ಯೂಸ್ ಮಾಡಿದ್ದಾರೆ. ಬಳಿಕ ಉಪ್ಪಿ ಮೊಬೈಲ್‌ನಿಂದಲೂ ಕಾಲ್‌ ಮಾಡಿದಾಗ ಅವರ ಫೋನ್‌ ಕೂಡ ಹ್ಯಾಕ್‌ ಆಗಿದೆ. ಬಳಿಕ ಅವರ ವಾಟ್ಸಪ್​​​ನಿಂದ ಆಪ್ತರಿಗೆ, ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಸಂದೇಶ ಕಳಿಸಿ ಹಣ ಕೇಳಲಾಗಿದೆ. ಈ ಜಾಲದಲ್ಲಿ ಉಪೇಂದ್ರ-ಪ್ರಿಯಾಂಕಾ ದಂಪತಿಯ ಪುತ್ರ ಆಯುಷ್ ಉಪೇಂದ್ರ ಕೂಡ 55 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಉಪೇಂದ್ರ ಅವರು ಮಾಹಿತಿ ನೀಡಿದ್ದಾರೆ.

Share Information