LATEST NEWS
ಮುಖ್ಯಮಂತ್ರಿ ಯುದ್ಧದ ವಿರುದ್ಧ ಮಾತನಾಡಿದಾಗ ಅವರ ಮೇಲೆ ಎಲ್ಲರೂ ಮುಗಿಬಿದ್ದರು…ಈಗ ಟ್ರಂಪ್ ಯುದ್ಧ ನಿಲ್ಲಿಸಿದಾಗ ಅವರೆಲ್ಲಾ ಏನು ಹೇಳುತ್ತಾರೆ

ಮಂಗಳೂರು ಮೇ 14: ಆಪರೇಶನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಧ್ಯಪ್ರದೇಶ ಬಿಜೆಪಿ ಸಚಿವನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಎಂಎಲ್ಸಿ ಮಂಜುನಾಥ ಭಂಡಾರಿ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣ ತ್ಯಾಗಕ್ಕೆ ತಯಾರಾಗಿದ್ದ ಆಕೆ ಕರ್ನಾಟಕದ ವೀರ ಸೊಸೆ. ಆಕೆಯ ವಿರುದ್ಧ ಈ ರೀತಿಯ ಅವಹೇಳನಕಾರಿ ಮಾತುಗಳನ್ನಾಡುವ ಬಿಜೆಪಿ ನಾಯಕರ ಮನಸ್ಥಿತಿಯನ್ನು ಇದು ತೋರಿಸುತ್ತದೆ ಎಂದರು. ಭಾರತ- ಪಾಕಿಸ್ತಾನ ಯುದ್ಧದ ಕುರಿತು ಚಕ್ರವರ್ತಿ ಸೂಲಿಬೆಲೆ ಸುಳ್ಳು ಹಾಗೂ ಪ್ರಚೋದನಾತ್ಮಕ ಭಾಷಣ ಮಾಡಿದ್ದು, ಅವರ ಮೇಲೂ ದೇಶದ್ರೋಹದ ಕೇಸು ದಾಖಲಿಸಬೇಕು. ಯುದ್ಧದ ಬಗ್ಗೆ ಈ ಈತಿಯ ಹೇಳಿಕೆ ನೀಡಲು ಇವರೇನು ವಕ್ತಾಕರರೇ, ಈ ರೀತಿ ಪ್ರಚೋದನಕಾರಿಯಾಗಿ ಮಾತನಾಡುವವರ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸಬೇಕಲ್ಲವೇ ಮಂಜುನಾಥ ಭಂಡಾರಿ ಪ್ರಶ್ನಿಸಿದರು.

ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮದ ಬಗ್ಗೆ ಜನತೆಗೆ ಸ್ಪಷ್ಟ ಮಾಹಿತಿ ನೀಡಲು ಸಂಸತ್ತು ಸಭೆ ಕರೆಯಬೇಕು. ಪಾಕಿಸ್ತನ ನಾವು ವಿಜಯ ಸಾಧಿಸಿದ್ದೇವೆ ಎನ್ನುತ್ತಿದೆ. ಅಮೆರಿಕ ಅಧ್ಯಕ್ಷ ತಾವು ಯುದ್ಧ ನಿಲ್ಲಿಸಿದ್ದಾಗಿ ಹೇಳುತ್ತಿದ್ದಾರೆ. ಸಿಮ್ಹಾ ಒಪ್ಪಂದದ ಪ್ರಕಾರ ಯಾವುದೇ ತೃತೀಯ ರಾಷ್ಟ್ರ ಮಧ್ಯಸ್ಥಿಕೆ ವಹಿಸು ವಂತಿಲ್ಲ. ಹಾಗಿದ್ದರೆ ಅಮೆರಿಕಕ್ಕೆ ನಮ್ಮನ್ನು ಮಾರಿಕೊಳ್ಳಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ದೊರೆಯ ಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯುದ್ಧದ ವಿರುದ್ಧ ಮಾತನಾಡಿದಾಗ ಅವರ ಮೇಲೆ ಎಲ್ಲರೂ ಮುಗಿಬಿದ್ದರು. ಈಗ ಟ್ರಂಪ್ ಯುದ್ಧ ನಿಲ್ಲಿಸಿದಾಗ ಅವರೆಲ್ಲಾ ಏನು ಹೇಳುತ್ತಾರೆ ಎಂದು ಮಂಜುನಾಥ ಭಂಡಾರಿ ಪ್ರಶ್ನಿಸಿದರು.